ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್-7’ ರ ಪ್ರತಿವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಉತ್ತಮವಾಗಿ ಆಟವಾಡುವ ಒಬ್ಬ ಸ್ಪರ್ಧಿಗೆ ಮೆಚ್ಚುಗೆಯ ಚಪ್ಪಾಳೆಯನ್ನು ತಟ್ಟುತ್ತಾರೆ. ಈ ವಾರ ಸುದೀಪ್ ಅವರು ಕುಂದಾಪುರದ ಭೂಮಿ ಶೆಟ್ಟಿಗೆ ತಮ್ಮ ಮೆಚ್ಚುಗೆಯ ಚಪ್ಪಾಳೆಯನ್ನು ತಟ್ಟಿದ್ದಾರೆ.
ಎರಡನೇ ವಾರ ಬಿಗ್‍ಬಾಸ್ ಮನೆಯಲ್ಲಿ ಒಂದು ಸೇಬು ತಿಂದಿದ್ದರಿಂದ ಚೈತ್ರಾ, ಸುಜಾತ, ಚಂದನ್ ನಡುವೆ ಜೋರಾಗಿ ಗಲಾಟೆ ನಡೆದಿತ್ತು. ಆಗ ಮನೆಯವರೆಲ್ಲರೂ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದರು. ಆದರೆ ಮತ್ತೆ ಮತ್ತೆ ಮೂವರ ಮಧ್ಯೆ ವಾದ-ವಿವಾದ ನಡೆಯುತ್ತಿತ್ತು. ನಂತರ ಭೂಮಿ ಶೆಟ್ಟಿ ನಡೆದ ಜಗಳದಲ್ಲಿ ಚಂದನ್ ಆಚಾರ್ ಮಾಡಿದ ತಪ್ಪನ್ನು ಎತ್ತಿ ತೋರಿಸಿದ್ದರು.
ಅಷ್ಟೇ ಅಲ್ಲದೇ ಬಿಗ್‍ಬಾಸ್ ನೀಡಿದ್ದ ‘ಸೇಬು ಬೇಕಾ ಸೇಬು’ ಟಾಸ್ಕ್ ಅನ್ನು ಕುಂದಾಪುರದ ಶೈಲಿಯಲ್ಲಿ ಆಪಲ್ ಮಾರಾಟ ಮಾಡಿ ಮನೆಗೆ ಅಧಿಕ ಪಾಯಿಂಟ್‍ಗಳನ್ನು ತಂದು ಕೊಟ್ಟಿದ್ದರು. ಹೀಗಾಗಿ ಸುದೀಪ್ ಅವರು ಭೂಮಿ ಶೆಟ್ಟಿಗೆ ಚೆನ್ನಾಗಿ ಈ ವಾರ ಆಟ ಆಡಿದ್ದೀರಿ ಎಂದು ಮೆಚ್ಚುಗೆಯ ಚಪ್ಪಾಳೆಯನ್ನು ತಟ್ಟಿದ್ದಾರೆ.