Connect with us

Bengaluru City

ಶ್ರೀರಾಮುಲು ಪುತ್ರಿ ಮದ್ವೆಯಲ್ಲಿ ಕಿಚ್ಚ – ನವ ಜೋಡಿಗೆ ವಿಶ್

Published

on

ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಅವರ ಪುತ್ರಿಯ ಮದುವೆ ಬೆಂಗಳೂರಿನ ಪ್ಯಾಲೇಸ್‍ನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಮದುವೆಗೆ ಶ್ರೀರಾಮುಲು ಗೆಳೆಯ ನಟ ಕಿಚ್ಚ ಸುದೀಪ್ ಹೋಗಿದ್ದು, ನವಜೋಡಿಗೆ ಶುಭಾಶಯ ಕೋರಿದ್ದಾರೆ.

ಶ್ರೀರಾಮುಲು ಮತ್ತು ಸುದೀಪ್ ಇಬ್ಬರು ಸ್ನೇಹಿತರಾಗಿದ್ದು, ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗಿದ್ದಾರೆ. ಹೀಗಾಗಿ ರಾಮುಲು ನೀಡಿದ್ದ ಮಗಳ ಮದುವೆ ಆಮಂತ್ರಣವನ್ನು ಸ್ವೀಕರಿಸಿ ಪ್ಯಾಲೇಸ್ ಮೈದಾನಕ್ಕೆ ಹೋಗಿ ವಧು ರಕ್ಷಿತಾ ಮತ್ತು ವರ ಸಂಜೀವ್ ರೆಡ್ಡಿಗೆ ಆಶೀರ್ವಾದ ಮಾಡಿದ್ದಾರೆ.

ನವ ಜೋಡಿಗೆ ವಿಶ್ ಮಾಡುತ್ತಿರುವ ಸುದೀಪ್ ಅವರ ಫೋಟೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸುದೀಪ್ ನೀಲಿ ಬಣ್ಣದ ಕುರ್ತಾ ಧರಿಸಿಕೊಂಡು ಮದುವೆಯಲ್ಲಿ ಮಿಂಚಿದ್ದಾರೆ.

ರಾಮುಲು ಮಗಳ ಮದುವೆಗಾಗಿ 40 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದ್ದು, ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನ ಹಾಗೂ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿತ್ತು. 40 ಎಕರೆಯಲ್ಲಿ 27 ಎಕರೆ ಮದುವೆ ಸೆಟ್, 4 ಎಕರೆಯಲ್ಲಿ ಮದುವೆ ಕಾರ್ಯ, 15 ಎಕರೆ ಪಾರ್ಕಿಂಗ್ ಮತ್ತು ಆರು ಎಕರೆ ಊಟಕ್ಕಾಗಿ ಸೆಟ್ ನಿರ್ಮಾಣಗೊಂಡಿತ್ತು.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಮದುವೆ ಸಂದರ್ಭದಲ್ಲಿ ಮೇಕಪ್ ಮಾಡಿದವರೇ ರಕ್ಷಿತಾಗೆ ಮೇಕಪ್ ಮಾಡಿದ್ದರು. ಉದ್ಯಮಿ ಅಂಬಾನಿ ಮಗನ ಮದುವೆ ಫೋಟೋ, ವಿಡಿಯೋ ತೆಗೆದ ಜಯರಾಮನ್ ಪಿಳ್ಳೈ ಜೊತೆ ದಿಲೀಪ್ ಅವರು ಶ್ರೀರಾಮುಲು ಪುತ್ರಿಯ ಮದುವೆ ಫುಲ್ ವಿಡಿಯೋ ಚಿತ್ರೀಕರಿಸಿದ್ದಾರೆ. ಊಟಕ್ಕೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಚಪಾತಿ, ಚಟ್ನಿ, ಎರಡು ರೀತಿ ಪಲ್ಯ, ಬಾದುಷಾ, ಮೈಸೂರು ಪಾಕ್ ರೀತಿಯ ಫ್ರೂಟ್ ಸ್ವೀಟ್, ಪಲಾವ್, ಮೊಸರು ಬಜ್ಜಿ, ಮಿರ್ಚಿ, ಉಪ್ಪಿನ ಕಾಯಿ, ಮಜ್ಜಿಗೆ, ಐಸ್ ಕ್ರೀಂ ಸೇರಿದಂತೆ ಹಲವು ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

Click to comment

Leave a Reply

Your email address will not be published. Required fields are marked *

www.publictv.in