ನಟ ಶಿವರಾಜ್‌ಕುಮಾರ್ (Shivarajkumar) ಚಿಕಿತ್ಸೆಗಾಗಿ ಇಂದು (ಡಿ.18) ಅಮೆರಿಕಗೆ ತೆರಳಿರುವ ಹಿನ್ನೆಲೆ ಬೆಂಗಳೂರಿನ ನಾಗವಾರದಲ್ಲಿರುವ ಅವರ ನಿವಾಸಕ್ಕೆ ಕಿಚ್ಚ ಸುದೀಪ್ (Kiccha Sudeep) ಮತ್ತು ಬಿ.ಸಿ ಪಾಟೀಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್‌ಗೆ ಮತ್ತೆ ಸಂಕಷ್ಟ – ಜಾಮೀನು ಪ್ರಶ್ನಿಸಿ ತೆಲಂಗಾಣ ಪೊಲೀಸರು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ
Advertisement
ಇದೇ ಡಿ.24ರಂದು ಶಿವಣ್ಣಗೆ ಸರ್ಜರಿ ನಡೆಯಲಿದ್ದು, ಇಂದು ರಾತ್ರಿ ಪತ್ನಿ ಮತ್ತು ಮಗಳು ನಿವೇದಿತಾ ಜೊತೆ ಯುಎಸ್‌ಗೆ ನಟ ತೆರಳಿದ್ದಾರೆ. ಹಾಗಾಗಿ ಅವರು ವಿದೇಶಕ್ಕೆ ಹೊರಡುವ ಮುನ್ನ ಶಿವಣ್ಣ ಮನೆಗೆ ಸುದೀಪ್ ಮತ್ತು ಬಿ.ಸಿ ಪಾಟೀಲ್ (B.C Patil) ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ.
Advertisement
Advertisement
ಇನ್ನೂ ಯುಎಸ್‌ಗೆ ಹೊರಡುವ ಮುನ್ನ ಮನೆಯಲ್ಲಿ ಶಿವಣ್ಣ ದಂಪತಿಗಳಿಂದ ವಿಶೇಷ ಪೂಜೆ ಮಾಡಲಾಗಿದೆ. ಇನ್ನೂ ಓದಿ:7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್