ಬೆಂಗಳೂರು: ಬಿಗ್‍ಬಾಸ್ ಸೀಸನ್ 6ನಲ್ಲಿ ಪ್ರತಿದಿನ ಒಂದಲ್ಲ ಒಂದು ಗಲಾಟೆ-ವಿವಾದ ನಡೆಯುತ್ತಿದೆ. ನಟ ಕಿಚ್ಚ ಸುದೀಪ್ ಅವರು ಎಲ್ಲರಿಗೂ ಬುದ್ಧಿ ಹೇಳುತ್ತಿದ್ದಾರೆ. ಅದೇ ರೀತಿ ಇದೀಗ ಆಧುನಿಕ ರೈತ ಶಶಿಗೆ ಬುದ್ಧಿ ಹೇಳಿದ್ದಾರೆ.
ಇತ್ತೀಚೆಗೆ ಬಿಗ್‍ಬಾಸ್ ಮನೆಯಲ್ಲಿ ಆಂಡ್ರ್ಯೂ ಮತ್ತು ಕವಿತಾ ನಡುವೆ ವಿವಾದ ನಡೆದಿದ್ದು, ಇದರಿಂದ ಆಧುನಿಕ ರೈತ ಶಶಿ ಕುಮಾರ್ ಆವೇಶಕ್ಕೆ ಒಳಗಾಗಿ ತಮ್ಮ ಕೈ ಮೂಳೆಯನ್ನೇ ಮುರಿದು ಕೊಂಡಿದ್ದರು.
Advertisement
Advertisement
ಈ ಗಲಾಟೆಯ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು, ಮನಸ್ಸು ಮಾತ್ರ ನಮ್ಮ ದೇಹದ ಭಾಗವಲ್ಲ. ಟಾಸ್ಕ್ ಮಾಡುವಾಗ ದೇಹದ ಎಲ್ಲ ಭಾಗವೂ ಮುಖ್ಯವಾದದ್ದು. ಆದ್ದರಿಂದ ಅವುಗಳನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ಈ ರೀತಿ ಕೈಗೆ ಪೆಟ್ಟು ಮಾಡಿಕೊಂಡರೆ ಕಠಿಣವಾದ ಟಾಸ್ಕ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಚೆನ್ನಾಗಿ ಪರ್ಫಾಮ್ ಮಾಡದೆ, ನಾಮಿನೆಟ್ ಆಗಿ ಬಿಗ್ ಬಾಸ್ ಮನೆಯಿಂದ ಹೋಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
Advertisement
Advertisement
ಮೊದಲ ಬಾರಿಗೆ ಕೈ ಹೊಡೆದುಕೊಂಡಾಗ ಮರದ ಗೋಡೆ ಆಗಿತ್ತು. ಆದ್ದರಿಂದ ಏನೂ ಆಗಿಲ್ಲ. ಆದರೆ ಎರಡನೇ ಬಾರಿ ಜೋರಾಗಿ ಕೋಪಗೊಂಡು ಹೊಡೆಯಲು ಹೋಗಿದ್ದೀರಿ. ದುರಾದೃಷ್ಟವಶಾತ್ ಕಾಂಕ್ರೀಟ್ ಗೋಡೆ ಆದ್ದರಿಂದ ಮೂಳೆಗಳು ಮುರಿದೆ. ನಮ್ಮ ಮನಸ್ಸು, ಆವೇಶ, ಭಾವನೆಗಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು. ಕೆಲವೊಮ್ಮೆ ನಮ್ಮದು ಯಾವುದಲ್ಲವೋ, ಅದು ನಮ್ಮದಲ್ಲ. ಅನ್ಯಾಯವಾಗಿ ಕೈ ಪೆಟ್ಟು ಮಾಡಿಕೊಂಡಿದ್ದೀರಿ. ಆದ್ದರಿಂದ ನೀವು ಕಂಟ್ರೋಲ್ ನಲ್ಲಿ ಇರಿ ಎಂದು ಸುದೀಪ್ ಅವರು ಶಶಿಗೆ ಬುದ್ಧಿ ಹೇಳಿದ್ದಾರೆ.
ಬಿಸ್‍ಬಾಸ್ ಮನೆಯಲ್ಲಿ ಆಂಡ್ರ್ಯೂ ಮತ್ತು ಕವಿತಾ ನಡುವೆ ಟಾಸ್ಕ್ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಇದರಿಂದ ಸ್ಪರ್ಧಿ ಕವಿತಾ ಬೇಸರದಿಂದ ಅಳುತ್ತಿದ್ದರು. ಆಗ ಶಶಿ ಕೋಪಗೊಂಡು ಜಯಶ್ರೀ ಜೊತೆ ಸೇರಿ ಆಂಡ್ರ್ಯೂ ಜೊತೆ ಮಾತುಕತೆ ನಡೆಸಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೋಪಗೊಂಡ ಶಶಿ ಗೋಡೆಗೆ ಕೈ ಗುದ್ದಿಕೊಂಡರು. ಪರಿಣಾಮ ಶಶಿ ಕೈಯ 2 ಮೂಳೆಗಳು ಮುರಿದು ಹೋಗಿವೆ. ಕೂಡಲೇ ವೈದ್ಯರ ಬಳಿಕ ಚಿಕಿತ್ಸೆ ಪಡೆದು ಕೊಂಡಿದ್ದು, ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv