Saturday, 21st July 2018

Recent News

ಬುಲೆಟ್ ಪ್ರಕಾಶ್‍ಗೆ ಟಾಂಗ್, ನಟ ಶ್ರೀನಗರ ಕಿಟ್ಟಿ ಹೇಳಿಕೆ ನೀಡಿದ್ದು ಹೀಗೆ

ದಾವಣಗೆರೆ: ಇತ್ತೀಚಿಗೆ ಹಾಸ್ಯ ನಟ ಬುಲೆಟ್ ಪ್ರಕಾಶ್ ದೊಡ್ಡ ನಟನ ಸಣ್ಣತನ ಬಯಲು ಮಾಡ್ತೀನಿ ಎಂದು ತಣ್ಣಗಾಗಿದ್ದರು. ಇಂದು ದಾವಣಗೆರೆಯಲ್ಲಿ ನಟ ಶ್ರೀನಗರ ಕಿಟ್ಟಿ ಹಾಸ್ಯ ನಟ ಬುಲೆಟ್ ಪ್ರಕಾಶ್‍ಗೆ ಟಾಂಗ್ ನೀಡಿದ್ದಾರೆ.

ಇಂದು ನಗರದಲ್ಲಿ ತಮ್ಮ ಸಿನಿಮಾ `ಸಿಲಿಕಾನ್ ಸಿಟಿ’ ಪ್ರಚಾರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಪ್ರಾಬಲ್ಯ ತೋರಿಸೋಕೆ ಹೋದ್ರೆ ನಿರ್ಮಾಪಕ ಹಾಳಾಗ್ತಾನೆ. ಅವರವರ ಬೇಳೆ ಬೇಯಿಸಿಕೊಳ್ಳಲು ಈ ತರಹದ ಆಟಗಳನ್ನಾಡುತ್ತಾರೆ. ಮೊದಲು ಈ ತರಹದ ಹೇಳಿಕೆ ಕೊಡುವುದನ್ನ ನಿಲ್ಲಿಸಲಿ. ಕನ್ನಡ ಚಿತ್ರರಂಗವನ್ನು ಬೆಳಸುವ ಕೆಲಸ ಮಾಡಿದ್ರೆ ಒಳ್ಳೆಯದು ಅದನ್ನು ಬಿಟ್ಟು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಜನರಿಗೆ ಮನಸ್ಸಿಗೆ ಹತ್ತಿರವಾಗುವಂತೆ ಸಿನಿಮಾ ಮಾಡಿ. ಆಗ ಕನ್ನಡ ಚಿತ್ರರಂಗಕ್ಕೆ ಒಂದು ಬೆಲೆ ಇರುತ್ತೆ, ನಿರ್ಮಾಪಕರು ಉಳಿಯುತ್ತಾರೆ ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಆ ‘ವ್ಯಕ್ತಿ’ಯಿಂದಾಗಿ ಕನ್ನಡ ಚಿತ್ರರಂಗ ಹಾಳಾಗಿದೆ: ಬುಲೆಟ್ ಬಾಂಬ್

ಈ ಕಮೆಂಟ್‍ಗಳಿಂದ ದೂರ ಇರುವುದೇ ಒಳ್ಳೆಯದು. ಪ್ರತಿಕ್ರಿಯೆ ನೀಡಿದರೆ ನಾವು ಅದರಲ್ಲಿ ಸೇರಿ ಹೋಗುತ್ತೇವೆ. ಹಿಂದೆ ಪೇಪರ್ ಮಾತ್ರ ಇತ್ತು. ನೀವು ಬರೆದದ್ದೆ ಸತ್ಯವಾಗಿತ್ತು. ಆದರೆ ಈಗ ಬದಲಾಗಿದೆ. ಹೀಗಾಗಿ ಸುಳ್ಳು ಸತ್ಯವಾಗುತ್ತದೆ. ಸತ್ಯ ಸುಳ್ಳಾಗುತ್ತದೆ. ದುರಂಹಕಾರ ತೋರಿಸದೇ ಒಳ್ಳೆಯ ಸಿನಿಮಾ ಮಾಡಬೇಕು. ಆಗ ಸಿನಿಮಾ ಇಂಡಸ್ಟ್ರಿ ಬೆಳೆಯುತ್ತದೆ ಎಂದು ತಿಳಿಸಿದರು.

ದಯವಿಟ್ಟು ಅನಾವಶ್ಯಕ ಹೇಳಿಕೆಯನ್ನು ಕೊಡೋದು ಬಿಟ್ಟು, ಜನ ನೋಡುವಂತಹ ಸಿನಿಮಾ ಮಾಡಿ, ಜನರ ಮನಸ್ಸಿಗೆ ಹತ್ರ ಆಗಿ, ನಿರ್ಮಾಪಕರ ಜೇಬು ತುಂಬಿಸಿದ್ರೆ ಸಾಕು. ಇನ್ನೊಂದು ಆರು ತಿಂಗಳು ಅಥವಾ ಒಂದು ವರ್ಷವಾದ್ರೆ ಯಾರು ಹೇಗಿರಬೇಕು ಎಲ್ಲಿರಬೇಕು ಎಂದು ಅರ್ಥವಾಗುತ್ತದೆ. ಇಂತಹಗಳು ಬಗ್ಗೆ ಕಮೆಂಟ್ ಮಾಡ್ತಾ ಕೂತರೆ ಅದರಲ್ಲೇ ನಾವು ಮುಳುಗಿ ಹೋಗ್ತಿ ಅಂದ್ರು.

ಇದನ್ನೂ ಓದಿ: ಯಾರಿಗೂ ಹೆದ್ರೋ ಅವಶ್ಯಕತೆಯಿಲ್ಲ, ಆದ್ರೆ ಆ ವ್ಯಕ್ತಿಯ ಹೆಸ್ರು ಹೇಳಲ್ಲ: ಬುಲೆಟ್ ಪ್ರಕಾಶ್

ಸಿಲಿಕಾನ್ ಸಿಟಿ ಇದೇ ತಿಂಗಳು 16ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಸಿಲಿಕಾನ್ ಸಿಟಿ ತಮಿಳಿನ ಮೆಟ್ರೋ ಸಿನಿಮಾ ರಿಮೇಕ್ ಆಗಿದ್ದು, ನಿರ್ದೇಶಕ ಮುರುಳಿ ಗುರುಪ್ಪ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಶ್ರೀನಗರ ಕಿಟ್ಟಿಗೆ ಕಾವ್ಯ ಶೆಟ್ಟಿ ಜೊತೆಯಾಗಿದ್ದಾರೆ. ಸೂರಜ್ ಗೌಡ, ಚಿಕ್ಕಣ್ಣ ಸೇರಿದಂತೆ ಸಿನಿಮಾ ದೊಡ್ಡ ತಾರಾಗಣವನ್ನು ಹೊಂದಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತವಿದೆ.

ಇದನ್ನೂ ಓದಿ: ವಿಡಿಯೋ: ಟ್ವಿಟ್ಟರ್‍ನಲ್ಲಿ ಆ ರೀತಿ ಸಾಲುಗಳು ಹಾಕಿದ್ದು ಯಾಕೆ? ಬುಲೆಟ್ ಪ್ರಕಾಶ್ ಹೇಳಿದ್ದಿಷ್ಟು

 

 

Leave a Reply

Your email address will not be published. Required fields are marked *