ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ಅವರು ಕಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರಾಗಿದ್ದಾರೆ. ಇನ್ನೂ ಸಾಕಷ್ಟು ಬಾರಿ ಅವರ ಬಾಲಿವುಡ್‌ಗೆ (Bollywood) ಎಂಟ್ರಿಯ ಬಗ್ಗೆ ಚರ್ಚೆಗೆ ಗ್ರಾಸವಾಗುತ್ತಲೇ ಇತ್ತು. ಈಗ ಆಮೀರ್ ಖಾನ್ ಜೊತೆಗಿನ ಸಿನಿಮಾ ಸುದ್ದಿ ಬಗ್ಗೆ ಸ್ವತಃ ಶಿವಕಾರ್ತಿಕೇಯನ್ ಮಾತನಾಡಿದ್ದಾರೆ. ಇದನ್ನೂ ಓದಿ:ದೇವಿ ಗೆಟಪ್‌ನಲ್ಲಿ ಕಾಜಲ್- ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ಔಟ್
ಆಮೀರ್ ಖಾನ್ (Aamir Khan) ಜೊತೆ ಶಿವಕಾರ್ತಿಕೇಯನ್ ಸಿನಿಮಾ ಮಾಡುತ್ತಾರೆ ಎಂಬ ವಿಚಾರಕ್ಕೆ ನಟ ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನದಲ್ಲಿ ಅವರು ಮಾತನಾಡಿ, ನಾನು ಆಮೀರ್ ಖಾನ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಆಗ ಅವರು ನೀವು ಹಿಂದಿ ಚಿತ್ರಕ್ಕೆ ಎಂಟ್ರಿ ಕೊಡುತ್ತೀರಾ ಅಂದರೆ ಅದು ನನ್ನ ನಿರ್ಮಾಣ ಸಂಸ್ಥೆಯಿಂದಲೇ ಎಂದು ಹೇಳಿದ್ದರು. ನಿಮ್ಮ ಬಳಿ ಯಾವುದಾದರೂ ಉತ್ತಮ ಕಥೆ ಇದ್ದರೆ ತಿಳಿಸಿ ಎಂದು ಆಮೀರ್ ಹೇಳಿದ್ದರು. ಒಂದಿಷ್ಟು ಸಿನಿಮಾ ಕಥೆಗಳನ್ನು ಕೇಳಿದ್ದೇನೆ. ಆದರೆ ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಶಿವಕಾರ್ತಿಕೇಯನ್ ಮಾತನಾಡಿದ್ದಾರೆ.
ಇನ್ನೂ ಸುಧಾ ಕೊಂಗರ (Sudha Kongara) ಜೊತೆಗಿನ ಹೊಸ ಸಿನಿಮಾಗೆ ಶಿವಕಾರ್ತಿಕೇಯನ್ ಓಕೆ ಎಂದಿದ್ದಾರೆ. ‘ಅಮರನ್’ ಸಿನಿಮಾದ ಸಕ್ಸಸ್ ನಂತರ ಸುಧಾ ಕೊಂಗರ ಜೊತೆ ನಟ ಕೈಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ನಟನಿಗೆ ಶ್ರೀಲೀಲಾ ಜೋಡಿ ಎಂದು ಹೇಳಲಾಗುತ್ತಿದೆ.