ಕಾಲಿವುಡ್ ನಟ ಸಿಂಬು (Actor Simbu) ಅವರ ಮದುವೆ ಬಗ್ಗೆ ಹಲವು ವಿಚಾರಗಳು ಕೆಲ ತಿಂಗಳುಗಳಿಂದ ಸದ್ದು ಮಾಡುತ್ತಿವೆ. ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ ಜೊತೆ ಸಿಂಬು ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಇದೀಗ ಮದುವೆ ಸುದ್ದಿ ಕುರಿತು ನಟ ಸಿಂಬು ಟೀಮ್ ಸ್ಪಷ್ಟನೆ ಕೊಟ್ಟಿದೆ.
ತೆಲುಗು ನಟಿ ನಿಧಿ ಅಗರ್ವಾಲ್ (Nidhhi Agerwal) ಜೊತೆ ಸಿಂಬು ಮದುವೆ ಆಗಲಿದ್ದಾರೆ. ಸದ್ಯದಲ್ಲೇ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ಇದೀಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದಕ್ಕೆ ಸಿಂಬು ಟೀಮ್ ಸ್ಪಷ್ಟನೆ ನೀಡಿದೆ. ಇದೊಂದು ಬೇಸ್ ಲೆಸ್ ಸುದ್ದಿ. ಈ ವಿಚಾರ ವದಂತಿಯಷ್ಟೇ, ಸತ್ಯವಲ್ಲ ಎಂದು ಸಿಂಬು ತಂಡ ಕ್ಲ್ಯಾರಿಟಿ ಕೊಟ್ಟಿದೆ.
ಅಂದಹಾಗೆ, 2021ರಲ್ಲಿ ‘ಈಶ್ವರನ್’ ಎಂಬ ಸಿನಿಮಾದಲ್ಲಿ ಸಿಂಬುಗೆ ನಾಯಕಿಯಾಗಿ ನಿಧಿ ನಟಿಸಿದ್ದರು. ಈ ಸಿನಿಮಾ ನಂತರ ಇಬ್ಬರ ಡೇಟಿಂಗ್ ಬಗ್ಗೆ ವದಂತಿ ಹಬ್ಬಿತ್ತು. ಇದನ್ನೂ ಓದಿ:‘ಪ್ರಾಪ್ತಿ’ ಸಿನಿಮಾ: ವರ್ತಮಾನಕ್ಕೆ ಹಿಡಿದ ಕನ್ನಡಿ
ಇನ್ನೂ ಈ ಹಿಂದೆ ತ್ರಿಷಾ, ಹನ್ಸಿಕಾ ಮೋಟ್ವಾನಿ, ನಯನತಾರಾ ಜೊತೆ ಸಿಂಬು ಡೇಟಿಂಗ್ ಮಾಡಿದ್ದರು ಎನ್ನಲಾದ ಸುದ್ದಿಗಳು ಹರಿದಾಡಿತ್ತು. ಯಾವುದು ಮದುವೆಯವರೆಗೂ ಬರಲಿಲ್ಲ.