ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ

Public TV
1 Min Read
kiara advani

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra), ಕಿಯಾರಾ ಅಡ್ವಾಣಿ (Kiara Advani) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇಬ್ಬರೂ ಹೊಸ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ತಮ್ಮ ಹೊಸ ಚಿತ್ರದ ಬಗ್ಗೆ ಸಿದ್ಧಾರ್ಥ್ ಮಾಹಿತಿ ನೀಡಿದ್ದಾರೆ.

siddarth malhotra 1

‘ಶೇರ್ಷಾ’ ಸಿನಿಮಾ ನಂತರ ಮತ್ತೆ ಸಿದ್ಧಾರ್ಥ್, ಕಿಯಾರಾ ಒಂದಾಗಿದ್ದಾರೆ. ಒಂದೊಳ್ಳೆಯ ಕಥೆಯ ಮೂಲಕ ಹೊಸ ಪ್ರೇಮಕಥೆಯನ್ನು ಹೇಳಲು ಹೊರಟಿದ್ದಾರೆ. ಆ್ಯಕ್ಷನ್ ಕಮ್ ರೊಮ್ಯಾನ್ಸ್ ಜೊತೆಯಾಗಿ ನಟಿಸುವ ವಿಚಾರ ನಿಜ ಎಂದು ಸಿದ್ಧಾರ್ಥ್ ಖಚಿತಪಡಿಸಿದ್ದಾರೆ. ಇದನ್ನೂ ಓದಿ:ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ

siddarth malhotra 1

ಈ ಹಿಂದೆ ಈ ಜೋಡಿಯ ಹೊಸ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡೋದಾಗಿ ತಿಳಿಸಿತ್ತು. ಅದೇ ಸಿನಿಮಾ ಬಗ್ಗೆ ನಟ ಮಾತನಾಡುತ್ತಿದ್ದಾರಾ ಎಂಬ ಮಾಹಿತಿ ಬಿಟ್ಟು ಕೊಟ್ಟಿಲ್ಲ.

‘ಶೇರ್ಷಾ’ ಸಿನಿಮಾ ಸಿದ್ಧಾರ್ಥ್ ದಂಪತಿ ಪಾಲಿಗೆ ತುಂಬಾನೇ ಸ್ಪೆಷಲ್. ಕೆರಿಯರ್ ಮತ್ತು ವೈವಾಹಿಕ ಜೀವನದಲ್ಲಿ ಖುಷಿಯಾಗಿ ಜೀವಿಸೋದಕ್ಕೆ ‘ಶೇರ್ಷಾ’ (Shershaah) ಚಿತ್ರ ಕಾರಣವಾಗಿದೆ. ಈಗ ಮೂರು ವರ್ಷಗಳ ನಂತರ ಹೊಸ ಚಿತ್ರಕ್ಕಾಗಿ ಇಬ್ಬರೂ ಜೊತೆಯಾಗುತ್ತಿದ್ದಾರೆ.

Share This Article