ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಇದೀಗ ಹೊಸ ಪ್ರಾಜೆಕ್ಟ್‌ವೊಂದನ್ನು ಒಪ್ಪಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ನಟನೆಯ ಬಹುನಿರೀಕ್ಷಿತ ‘ರೈಸ್ 4’ (Race 4) ಚಿತ್ರಕ್ಕೆ ಸಿದ್ಧಾರ್ಥ್ ಎಂಟ್ರಿ ಕೊಡಲಿದ್ದಾರೆ. ಇದನ್ನೂ ಓದಿ:ಹುಟ್ಟೂರಿನಲ್ಲಿ ಮೀನಿಗೆ ಗಾಳ ಹಾಕುತ್ತಿರುವ ರಿಷಬ್ ಶೆಟ್ಟಿ ಫೋಟೋ ವೈರಲ್
‘ರೈಸ್ 4’ ಸಿನಿಮಾದ ಬಗ್ಗೆ ದಿನದಿಂದ ದಿನಕ್ಕೆ ಇಂಟರೆಸ್ಟಿಂಗ್ ಅಪ್‌ಡೇಟ್ ಸಿಗುತ್ತಿದೆ. ಸೈಫ್ ಅಲಿ ಖಾನ್ (Saif Ali Khan) ಜೊತೆ ಸಿನಿಮಾ ಮಾಡಲು ಸಿದ್ಧಾರ್ಥ್ ಮುಂದಾಗಿದ್ದಾರೆ. ಚಿತ್ರದಲ್ಲಿ ತಿರುವು ಕೊಡಲಿರುವ ಪಾತ್ರದಲ್ಲಿ ಅವರು ನಟಿಸಲಿದ್ದಾರೆ ಎಂಬುದು ಬಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸಂಗತಿ.
ಸಾಮಾನ್ಯವಾಗಿ ತಾವು ಕೂಡ ಹೀರೋ ಆಗಿದ್ದು ಬೇರೆ ಅವರ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳುವುದಿಲ್ಲ. ಈಗ ಕಾಲ ಬದಲಾಗಿದೆ. ಕತೆ ಮತ್ತು ಪಾತ್ರಕ್ಕೆ ಸ್ಕೋಪ್ ಇದ್ರೆ ಎಂತಹ ಸ್ಟಾರ್ ಆದ್ರೂ ನಟಿಸಿ ಹೋಗ್ತಾರೆ. ಸಿದ್ಧಾರ್ಥ್ ವಿಚಾರದಲ್ಲೂ ಹಾಗೇ ಆಗಿದೆ. ಅವರು ನಟಿಸಲಿರುವ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ರೋಲ್ ಇಷ್ಟವಾಗಿ ‘ರೈಸ್ 4’ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇನ್ನೂ ಸೈಫ್ (Saif ali Khan) ಜೊತೆ ಸಿದ್ಧಾರ್ಥ್ ಜುಗಲ್‌ಬಂದಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷ ಶುರುವಿನಲ್ಲಿ ಈ ಚಿತ್ರಕ್ಕೆ ಚಾಲನೆ ಸಿಗಲಿದೆ.