ಕಮಲ್ ಹಾಸನ್ ಕಂಡರೆ ಹೊಟ್ಟೆ ಉರಿಯುತ್ತೆ-‌ ಹೀಗ್ಯಾಕಂದ್ರು ನಟ ಸಿದ್ಧಾರ್ಥ್

Public TV
1 Min Read
siddarth

ತೆಲುಗು- ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟ ಸಿದ್ಧಾರ್ಥ್ (Siddarth) ಸದ್ಯ ‘ಟಕ್ಕರ್’ (Takkar) ಸಿನಿಮಾದ ಮೂಲಕ ಸದ್ದು ಮಾಡ್ತಿದ್ದಾರೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ಸಿದ್ಧಾರ್ಥ್, ಕಮಲ್ ಹಾಸನ್ (Kamal Haasan) ನೋಡಿದ್ರೆ ನನಗೆ ಹೊಟ್ಟೆ ಕಿಚ್ಚು ಅಂತಾ ಹೇಳಿಕೆ ನೀಡಿದ್ದಾರೆ. ಸಿನಿಮಾರಂಗದಲ್ಲಿ ನನ್ನ ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಮಾತನಾಡಿದ್ದಾರೆ.

siddarth 2

ಬೊಮ್ಮರಿಲ್ಲು, ಬಾಯ್ಸ್, ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ಮಹಾಸಮುದ್ರಂ’ ಚಿತ್ರದ ನಂತರ ಮತ್ತೆ ಭಿನ್ನ ಪಾತ್ರ, ಚಿತ್ರಗಳ ಮೂಲಕ ಸಿದ್ಧಾರ್ಥ್ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

 

View this post on Instagram

 

A post shared by Siddharth (@worldofsiddharth)

ಜೂನ್ 9ಕ್ಕೆ ಟಕ್ಕರ್ ಸಿನಿಮಾ ರಿಲೀಸ್ ಆಗುತ್ತಿದೆ. ರಿಲೀಸ್ ಹೊಸ್ತಿಲಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ವಿವಿಧ ಸಂದರ್ಶನಗಳಲ್ಲಿ ನಟ ಮಾತನಾಡುತ್ತಿದ್ದಾರೆ. ಈ ವೇಳೆ ಚಿತ್ರರಂಗದಲ್ಲಿ ತಮಗೆ ಹಿನ್ನಡೆ ಆಗುತ್ತಿದೆ. ಯಾಕೆ ಅಂತ ಗೊತ್ತಿಲ್ಲ, ನೇರವಾಗಿ ಹೇಳದೇ ಇದ್ದರೂ ಪರೋಕ್ಷವಾಗಿ ನನ್ನನ್ನು ಚಿತ್ರರಂಗದಲ್ಲಿ ತುಳಿಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಕೆಲವರು ನನ್ನ ಮೇಲೆ ಸಂಚು ರೂಪಿಸಿದ್ದಾರೆ ಎನ್ನುವ ಅರ್ಥದಲ್ಲಿ ಸಿದ್ಧಾರ್ಥ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕಮಲ್ ಹಾಸನ್‌ನ ನೋಡಿದ್ರೆ ನನಗೆ ಹೊಟ್ಟೆಕಿಚ್ಚು. ಯಾಕಂದ್ರೆ ಅವರು ಹೀರೋ ಆದ ಸಂದರ್ಭದಲ್ಲಿ ತೆಲುಗಿನ ಖ್ಯಾತ ನಿರ್ದೇಶಕರ ಜೊತೆ ಅವರು ಸಿನಿಮಾ ಮಾಡಿದರು. ಅವರಿಗೆ ಸಿಕ್ಕ ಅವಕಾಶಗಳು ನನಗೆ ಸಿಗಲಿಲ್ಲ. ಆ ಸಮಯಲ್ಲಿ ನನ್ನ ಪ್ರತಿಭೆ ದೊಡ್ಡ ನಿರ್ದೇಶಕರಿಗೆ ಗೊತ್ತಾಗಲಿಲ್ಲ ಅಂತ ನಾನು ಹೇಳ್ತೀನಿ. ಫೀಕ್‌ನಲ್ಲಿ ಇದ್ದಾಗಲೇ ನನ್ನ ಪ್ರತಿಭೆ ಯಾರಿಗೂ ಗೊತ್ತಾಗಲಿಲ್ಲ ಎಂದು ಸಿದ್ಧಾರ್ಥ್ ಬೇಸರ ಹೊರಹಾಕಿದ್ದಾರೆ.

Share This Article