ಒಂದಷ್ಟು ಸಿನಿಮಾಗಳು ಆರಂಭದಿಂದಲೇ ಪ್ರೇಕ್ಷಕರನ್ನು ನಾನಾ ಬಗೆಯಲ್ಲಿ ಆವರಿಸಿಕೊಳ್ಳುತ್ತವೆ. ಕಂಟೆಂಟು, ಕ್ವಾಲಿಟಿ ಅಥವಾ ತಾರಾಬಳಗದಿಂದ ಚಿತ್ರ ಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸುತ್ತವೆ. ಈಗ ಕಂಟೆಂಟ್ ಜೊತೆಗೆ ತಾರಾಬಳಗದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವುದು ಧಮಾಕ ಸಿನಿಮಾ. ಮನರಂಜನೆ ಜೊತೆಗೆ ಮನರಂಜನೆ ಉಣಬಡಿಸುವ ಇಬ್ಬರು ಅದ್ಭುತ ಕಲಾವಿದರ ಸಮಾಗಮದ ಧಮಾಕ ಟ್ರೇಲರ್ ಬಿಡುಗಡೆಯಾಗಿದೆ. ಭರಪೂರ ಮನರಂಜನೆ ಹೊತ್ತು ಬಂದಿರುವ ಟ್ರೇಲರ್, ನೋಡುಗರಿಗೆ ನಗುವಿನ ಟಾನಿಕ್ ನೀಡುತ್ತಿದೆ.
ಖ್ಯಾತ ಹಾಸ್ಯನಟ ಚಿಕ್ಕಣ್ಣನ ಹಿನ್ನೆಲೆ ಧ್ವನಿಯಿಂದ ಶುರುವಾಗುವ ಟ್ರೇಲರ್ ಆರಂಭದಿಂದ ಕೊನೆವರೆಗೂ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸುತ್ತದೆ. ಶಿವರಾಜ್ ಕೆ.ಆರ್. ಪೇಟೆ ಎಂದಿನಂತೆ ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರ ಮೊಗದಲ್ಲಿ ನಗುಮೂಡಿಸ್ತಾರೆ. ಇವರಿಗೆ ಜೋಡಿಯಾಗಿ ನಯನಾ ನಟಿಸಿದ್ದಾರೆ. ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಪ್ರಕಾಶ್ ತುಮಿನಾಡು, ಮಹಾಂತೇಶ್ ಹಿರೇಮಠ, ಅರುಣಾ ಬಾಲರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಕಾಮಿಡಿ ಜೊತೆಗೆ ಒಂದು ಗಟ್ಟಿ ಸಂದೇಶವಿರುವ ಧಮಾಕ ಚಿತ್ರಕ್ಕೆ ಲಕ್ಷ್ಮೀ ರಮೇಶ್ ನಿರ್ದೇಶನವಿದೆ. ಇದು ಇವರ ಚೊಚ್ಚಲ ಸಿನಿಮಾವಾಗಿದ್ದು, ಮೊದಲ ಹೆಜ್ಜೆಯಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಉತ್ಸಾಹದಲ್ಲಿದ್ದಾರೆ. ಇದನ್ನೂ ಓದಿ: Breaking: ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಸ್ಫೂರ್ತಿ ಗೌಡ ಎಲಿಮಿನೇಟ್
ನಗೆಯ ಕಚಗುಳಿ ಇಡುವ ಧಮಾಕ ಸಿನಿಮಾವನ್ನು ಎಸ್ಆರ್ ಮೀಡಿಯಾ ಪ್ರೊಡಕ್ಷನ್ ಬ್ಯಾನರ್ ನಡಿ ಸುನೀಲ್, ಎಸ್. ರಾಜ್ ಮತ್ತು ಅನ್ನಪೂರ್ಣ ಪಾಟೀಲ ನಿರ್ಮಾಣ ಮಾಡಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ, ಹಾಲೇಶ್.ಎಸ್ ಛಾಯಾಗ್ರಹಣ, ರಘು ಆರ್.ಜೆ. ನೃತ್ಯ ನಿರ್ದೇಶನ, ವಿನಯ್ ಕೂರ್ಗ್ ಸಂಕಲನ ಸಿನಿಮಾಕ್ಕಿದೆ. ಟೀಸರ್, ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಧಮಾಕ ಬಳಗ ಈಗ ಟ್ರೇಲರ್ ಮೂಲಕ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ನಗುವಿನ ಅಲೆಯಲ್ಲಿ ನಿಮ್ಮನ್ನು ಮಿಂದೇಳುವಂತೆ ಮಾಡಲು ಶೀಘ್ರದಲ್ಲೇ ಚಿತ್ರತಂಡ ಬಿಡುಗಡೆ ದಿನಾಂಕ ಅನೌನ್ಸ್ ಮಾಡಲಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಕಿಚ್ಚನ ಪಂಚಾಯಿತಿಯಲ್ಲಿ ಸಾನ್ಯಾ-ರೂಪೇಶ್ ಮಿಡ್ ನೈಟ್ ವಿಚಾರ ಬಿಸಿ ಬಿಸಿ ಚರ್ಚೆ