ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಗಳ ಪೈಕಿ ನಿರೀಕ್ಷೆ ಹೆಚ್ಚಿಸಿರುವುದು ಈ ಸಿನಿಮಾ. ಈ ಚಿತ್ರದ ಕುರಿತ ಹೊಸ ಅಪ್‌ಡೇಟ್ ಸಿಕ್ಕಿದೆ. ಇಂದು ಶಿವಣ್ಣನ ಮಡದಿ ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದೆ. ಇದನ್ನೂ ಓದಿ:ಇಂದಿನಿಂದ ಬಿಗ್ ಬಾಸ್ ಒಟಿಟಿ ಸ್ಟಾರ್ಟ್- ಸ್ಪರ್ಧಿಗಳ ಲಿಸ್ಟ್ ಔಟ್
Advertisement
ಶಿವರಾಜ್ ಕುಮಾರ್‌ಗೆ ಆ್ಯಕ್ಷನ್ ಕಟ್ ಹೇಳ್ತಿರುವುದು ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್. ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ಪಾಯುಮ್ ಒಲಿ ನೀ ಎನಕ್ಕು ಚಿತ್ರ ನಿರ್ದೇಶಿಸಿದ್ದಾರೆ. ಇದೀಗ ಸ್ಯಾಂಡಲ್ವುಡ್ (Sandalwood) ಅಂಗಳಕ್ಕೆ ಎಂಟ್ರಿ ಕೊಡ್ತಿರುವ ಇವರಿಗೆ ನಿರ್ದೇಶಕನಾಗಿ ಎರಡನೇ ಸಿನಿಮಾ.
Advertisement
Advertisement
ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫೆರೆಂಟ್ ಲುಕ್‌ನಲ್ಲಿ ಕಾಣಸಿಕೊಳ್ಳಲಿದ್ದಾರೆ. ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಸದ್ಯ ಮ್ಯೂಸಿಕ್ ವರ್ಕ್ ಭರದಿಂದ ಸಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ. ಸದ್ಯಕ್ಕೆ ಬೇರೆ ಕಲಾವಿದರ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಚಿತ್ರೀಕರಣಕ್ಕೆ ತೆರಳಲು ಸಜ್ಜಾಗಿದೆ ಚಿತ್ರತಂಡ. ಸ್ಯಾಮ್ ಸಿ.ಎಸ್ ಸಂಗೀತ, ಎಜೆ ಶೆಟ್ಟಿ ಛಾಯಾಗ್ರಹಣ, ದೀಪು S ಕುಮಾರ್ ಸಂಕಲನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಚಿತ್ರಕ್ಕಿದೆ.