ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ 131ನೇ ಸಿನಿಮಾಗೆ ತಮಿಳಿನ ನಿರ್ದೇಶಕ ಕಾರ್ತಿಕ್ ಅದ್ವೈತ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು (ಆ.16) ನಟ ಶಿವಣ್ಣ ನಟನೆಯ ಹೊಸ ಚಿತ್ರ ಸೆಟ್ಟೇರಿದೆ.
ಇಂದು (ಆ.16) ಸರಳವಾಗಿ ಕಂಠೀರವ ಸ್ಟುಡಿಯೋದಲ್ಲಿ ಶಿವಣ್ಣ ನಟನೆಯ 131ನೇ ಚಿತ್ರಕ್ಕೆ ಮುಹೂರ್ತ ಸಮಾರಂಭ ಜರುಗಿದೆ. ಶಿವಣ್ಣಗೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿದೆ.ಇನ್ನೂ ಎಂದೂ ಕಾಣಿಸಿಕೊಂಡಿರದ ವಿಭಿನ್ನ ರೋಲ್‌ನಲ್ಲಿ ಶಿವರಾಜ್‌ಕುಮಾರ್ ನಟಿಸಲಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡಲೆಂದೇ ತಮಿಳಿನಿಂದ ಕಾರ್ತಿಕ್ ಅದ್ವೈತ್ ಕನ್ನಡಕ್ಕೆ ಬಂದಿದ್ದಾರೆ.
ಇದೊಂದು ಪಕ್ಕಾ ರೌಡಿಸಂ ಕಥೆಯಾಗಿದ್ದು, ಈ ಚಿತ್ರವನ್ನು ಎಸ್ ಎನ್ ರೆಡ್ಡಿ, ಮತ್ತು ಸುಧೀರ್ ಪಿ ಅವರು ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇದನ್ನೂ ಓದಿ:ನಾಗಚೈತನ್ಯ, ಶೋಭಿತಾ ನಿಶ್ಚಿತಾರ್ಥ- ತಿರುಗೇಟು ಕೊಟ್ಟ ಸಮಂತಾ
ಇನ್ನೂ ಭೈರತಿ ರಣಗಲ್, ಭೈರವನ ಕೊನೆ ಪಾಠ, ಘೋಸ್ಟ್ 2, 45 ಸಿನಿಮಾ, ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಜೊತೆ ತೆಲುಗು ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ.