ಚೆನ್ನೈ: ಕಾಲಿವುಡ್ ನಟ ಸತ್ಯರಾಜ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಫೇಮಸ್ ಆಗಿದ್ದ ನಟ ಸತ್ಯರಾಜ್ ಅವರು ಕೊರೊನಾ ಪಾಸಿಟವ್ ಬಂದಿದ್ದು, ಇದೀಗ ಅವರನ್ನು ಚೆನ್ನೈನ ಅಮಿಂಜಿಕ್ಕರೈನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೀಘ್ರವೇ ಆಸ್ಪತ್ರೆಯಿಂದ ಅವರ ಹೆಲ್ತ್ ಬುಲೆಟಿನ್ ಹೊರಬೀಳಲಿದೆ. ಇದನ್ನೂ ಓದಿ: ಕುಟುಂಬದೊಂದಿಗೆ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿದ ಯಶ್
ಮತ್ತೊಂದೆಡೆ ನಿರ್ದೇಶಕ ಪ್ರಿಯದರ್ಶನ್ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಕೊಂಚ ಆರೋಗ್ಯದಲ್ಲಿ ಚೇತರಿಕೆಕಂಡಿದೆ. ಇದನ್ನೂ ಓದಿ: ಪ್ರಿನ್ಸ್ ಮಹೇಶ್ ಬಾಬುಗೆ ಕೊರೊನಾ ಪಾಸಿಟಿವ್
ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಇತ್ತೀಚೆಗಷ್ಟೇ ಟಾಲಿವುಡ್ ನಟ ಮಹೇಶ್ ಬಾಬು, ಸಂಗೀತಾ ಸಂಯೋಜಕ ಥಮನ್ ಮತ್ತು ನಟಿ ತ್ರಿಶಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳಿಗೆ ಕೊರೊನಾ ದೃಢಪಟ್ಟಿದೆ.