ಬೆಂಗಳೂರು: ಸಂಕ್ರಾಂತಿ ಹಬ್ಬದಂದು ಕಿಚ್ಚ ಸುದೀಪ್ ಅವರು ತಮ್ಮ ಅಭಿನಯದ ‘ಪೈಲ್ವಾನ್’ ಸಿನಿಮಾದ ಫಸ್ಟ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಿದ್ದರು. ಈಗ ಬಾಲಿವುಡ್ ನಟ ಸಲ್ಮಾನ್ ಖಾನ್ ಸುದೀಪ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ನಟ ಸಲ್ಮಾನ್ ಖಾನ್ ಅವರು ಟ್ವೀಟ್ ಮಾಡುವ ಮೂಲಕ ನಟ ಸುದೀಪ್ ಅವರಿಗೆ ‘ಪೈಲ್ವಾನ್’ ಸಿನಿಮಾದ ಟೀಸರ್ ಗಾಗಿ ಅಭಿನಂದನೆ ತಿಳಿಸಿದ್ದಾರೆ. ಸಿನಿಮಾ ಟೀಸರ್‍ನ ಯೂಟ್ಯೂಬ್ ಲಿಂಕ್ ಹಾಕಿ, “ಕಿಚ್ಚ ಸುದೀಪ್ ನೀವು ನಮ್ಮ ಪ್ರಯತ್ನವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಆಲ್ ದಿ ಬೆಸ್ಟ್ ಪೈಲ್ವಾನ್ ಹಾಗೂ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
ಮಂಗಳವಾರ ಸಂಜೆ 4.45ಕ್ಕೆ ಪೈಲ್ವಾನ್ ಸಿನಿಮಾದ ಫಸ್ಟ್ ಟೀಸರ್ ರಿಲೀಸ್ ಆಗಿದ್ದು, ಇದಕ್ಕೆ ಸ್ಯಾಂಡಲ್‍ವುಡ್ ಮಂದಿ ಸಾಮಾಜಿಕ ಜಾಲತಾಣಗಲ್ಲಿ ನಟ ಸುದೀಪ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಇನ್ನೂ ಅಭಿಮಾನಿಗಳು ಪೈಲ್ವಾನ್ ಪೋಸ್ಟರ್‍ಗೆ ಪೂಜೆ, ಅಭಿಷೇಕ ಮಾಡಿ ಹಬ್ಬದಂತೆ ಟೀಸರ್ ನ ಬರಮಾಡಿಕೊಂಡಿದ್ದಾರೆ. ‘ಪೈಲ್ವಾನ್’ ಟೀಸರ್ ಬಿಡುಗಡೆಯಾಗಿ 14 ಗಂಟೆಗಳಾಗಿದೆ. ಆದರೆ ಸಾಮಾಜಿಕ ಜಾಲತಾಣಗಲ್ಲಿ ಆಗಲೇ ತನ್ನದೇ ಆದ ಹವಾ ಸೃಷ್ಟಿ ಮಾಡಿದೆ. ಟೀಸರ್ ಈಗಾಗಲೇ 15 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದ್ದು, 90 ಸಾವಿರ ಲೈಕ್ಸ್ ಕಂಡಿದೆ.
Advertisement
Advertisement
ಕಟ್ಟುಮಸ್ತಾದ ಕುಸ್ತಿಪಟುವಿನ ಪಾತ್ರದಲ್ಲಿ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಯಾವ ಸಿನಿಮಾದಲ್ಲೂ ಸುದೀಪ್ ತಮ್ಮ ಶರ್ಟ್ ತೆಗೆದಿರಲಿಲ್ಲ. ಮೊದಲ ಬಾರಿಗೆ ಪೈಲ್ವಾನ್ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿರುವ ಕಿಚ್ಚನ ಹೊಸ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು. ರಣ ರಣ ಧೂಳಿನ ನಡುವೆ ಕುಸ್ತಿ ಅಖಾಡದಲ್ಲಿ ಸುದೀಪ್ ತೊಡೆ ತಟ್ಟಿದ್ದ ಒಂದು ಫೋಟೋ ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬುದನ್ನು ಸಾಬೀತು ಮಾಡಿತ್ತು.
.@KicchaSudeep , you have taken what we started to another level????, all the best and congrats to the MAN, to the PAILWAAN???? https://t.co/laQtS6WofQ
— Salman Khan (@BeingSalmanKhan) January 15, 2019
ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸುದೀಪ್ ಆಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಸಂಕ್ರಮಣಕ್ಕಾಗಿ ನಾಡಿನ ಜನತೆಯ ಮನ ಗೆಲ್ಲಲು ಅಖಾಡಕ್ಕೆ ಪೈಲ್ವಾನ್ ಎಂಟ್ರಿ ನೀಡಿದ್ದು, ನೋಡಿ ಎಂಜಾಯ್ ಮಾಡಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv