ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾದ ಸೋಲಿನ ನಂತರ ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದಿದ್ದಾರೆ. ‘ತಪ್ಪೆಲ್ಲ ನನ್ನದೇ ಎಂದು ತಾವು ಪ್ರೀತಿಯಲ್ಲಿ ಎಡವಿದ್ದು ಎಲ್ಲಿ’ ಎಂದು ಬಾಯ್ಬಿಟ್ಟಿದ್ದಾರೆ.
ಇತ್ತೀಚಿಗೆ ತೆರೆಯ ಕಂಡ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ನಿರೀಕ್ಷಿಸಿದ ಹಾಗೆ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಮಾಯಿ ಮಾಡಲಿಲ್ಲ. ಸಲ್ಮಾನ್ ಖಾನ್ ಅವರೇ ನಟಿಸಿ, ನಿರ್ಮಾಣ ಮಾಡಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಳೆಯ ರಿಲೇಶನ್‌ಶಿಪ್ ವಿಚಾರಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಇಂದು ನನ್ನ ಎಲ್ಲಾ ಎಕ್ಸ್‌ಗಳು ಒಳ್ಳೆಯ ಸ್ಥಾನದಲ್ಲಿದ್ದಾರೆ, ಖುಷಿಯಾಗಿದ್ದಾರೆ. ಅವರು ಇಂದು ನನ್ನ ಜೊತೆ ಇರದೇ ಇರಲು ನನ್ನ ತಪ್ಪೇ ಕಾರಣ ಎಂದಿದ್ದಾರೆ.
ಪ್ರೀತಿಯಲ್ಲಿ ನಾನು ದುರಾದೃಷ್ಟವಂತ. ಎಲ್ಲರೂ ಒಳ್ಳೆಯವರಾಗಿದ್ದರು. ಆದರೆ, ತಪ್ಪು ನನ್ನದೇ. ಮೊದಲ ವ್ಯಕ್ತಿ ಬಿಟ್ಟು ಹೋದಾಗ ತಪ್ಪು ಅವರದ್ದು ಅನಿಸುತ್ತದೆ. ಇದು ಪದೇಪದೇ ರಿಪೀಟ್ ಆದಾಗ ಅನುಮಾನ ಬರುತ್ತದೆ. ತಪ್ಪು ಅವರದ್ದೋ ಅಥವಾ ನನ್ನದೋ ಎನ್ನುವ ಪ್ರಶ್ನೆ ಮೂಡುತ್ತದೆ. ನನ್ನ ಜೀವನದಲ್ಲಿ ವಿಶೇಷವಾದ ಯಾರಾದರೂ ಬರಬಹುದು ಎಂಬ ಭರವಸೆಯನ್ನು ಹೊಂದಿದ್ದೇನೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಹೆಚ್ಚೆಚ್ಚು ಮಂದಿ ನಮ್ಮನ್ನು ಬಿಟ್ಟು ಹೋದರು ಎಂದರೆ ಆಗ ತಪ್ಪು ನಮ್ಮದೇ ಅನ್ನೋದು ಖಚಿತವಾಗುತ್ತದೆ. ಅವರಲ್ಲಿ ಯಾವುದೇ ತಪ್ಪಿರಲಿಲ್ಲ. ತಪ್ಪೆಲ್ಲ ನನ್ನದೇ. ಅವರು ಅಂದುಕೊಂಡ ರೀತಿಯ ಜೀವನ, ಖುಷಿಯನ್ನು ನನಗೆ ನೀಡಲು ಆಗದಿದ್ದರೆ ಎನ್ನುವ ಭಯ ಇದ್ದೇ ಇತ್ತು. ನನ್ನನ್ನು ಬಿಟ್ಟು ಹೋದ ಎಲ್ಲರೂ ಖುಷಿಯಿಂದ ಇದ್ದಾರೆ ಎಂದು ಐಶ್ವರ್ಯ ರೈ(Aishwarya Rai), ಕತ್ರಿನಾ ಕೈಫ್ (Katrina Kaif) ಬಗ್ಗೆ ಪರೋಕ್ಷವಾಗಿ ನಟ ಮಾತನಾಡಿದ್ದಾರೆ.