ಹಿಂದಿ ಕಿರುತೆರೆ ನಟ ರಿತುರಾಜ್ ಸಿಂಗ್ (Rituraj Singh) ಅವರು ಹೃದಯ ಸ್ತಂಭನದಿಂದ (Cardiac Arrest) ಫೆ.20ರಂದು ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ರಿತುರಾಜ್ ಆಪ್ತ ಅಮಿತ್ ಬೆಹ್ಲ್ ನಿಧನದ ಬಗ್ಗೆ ಮಾಧ್ಯಮಕ್ಕೆ ಅಧಿಕೃತ ಮಾಹಿತಿ ನೀಡಿದ್ದಾರೆ. ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಹಲವು ದಿನಗಳಿಂದ ನಟ ಬಳಲುತ್ತಿದ್ದರು. ಇದನ್ನೂ ಓದಿ:ವಿಮಾನ ದುರಂತದಿಂದ ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ & ಮಾರ್ಟಿನ್ ಟೀಂ ಪಾರು!
ನಟ ಅಮಿತ್ ಬೆಹ್ಲ್ ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿ ರಿತುರಾಜ್ ಸಿಂಗ್ ಅವರು 12:30ಕ್ಕೆ ನಿಧನರಾದರು. ಹಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಮೇಲೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು. ಮತ್ತೆ ಈ ಸಮಸ್ಯೆಯಿಂದ ಅಹಿತಕರ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ನಟನ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ರಿತುರಾಜ್ ಅವರು ಬನೇಗಿ ಅಪ್ನಿ ಬಾತ್, ಜ್ಯೋತಿ ಹಿಟ್ಲರ್ ದೀದಿ, ಶಪತ್ ವಾರಿಯರ್ ಹೈ, ಸೇರಿದಂತೆ ಹಲವು ಶೋಗಳಲ್ಲಿ ನಟಿಸಿದ್ದಾರೆ. ಲಾಡೋ 2 ಸೀರಿಯಲ್‌ನಲ್ಲಿ ಬಲವಂತ ಚೌಧರಿ ಪಾತ್ರದಲ್ಲಿ ನಟಿಸಿದ್ದಾರೆ. ಅನುಪಮಾ ಸೀರಿಯಲ್ ರೀತುರಾಜ್‌ಗೆ ಹೆಚ್ಚು ಜನಪ್ರಿಯತೆ ಕೊಟ್ಟಿತ್ತು. ವರುಣ್ ಧವನ್ ನಟನೆಯ ‘ಬದ್ರಿನಾಥ್ ಕಿ ದುಲ್ಹನಿಯಾ’, ‘ಯಾರಿಯಾನ್ 2’ ಚಿತ್ರದಲ್ಲಿ ರಿತುರಾಜ್ ಅಭಿನಯಿಸಿದ್ದಾರೆ.