`ಕಾಂತಾರ’ (Kantara Film) ಸೂಪರ್ ಸಕ್ಸಸ್ ನಂತರ ಭೂತಕೋಲ ಹಿಂದೂ ಧರ್ಮದ ಆಚರಣೆ ಅಲ್ಲ ಎಂದು ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಹೇಳಿಕೆ ಸಂಬಂಧಿಸಿದಂತೆ ನಟ ರಿಷಬ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಚೇತನ್(Chetan) ಮಾತಿಗೆ ನೋ ಕಾಮೆಂಟ್ಸ್ ಎಂದಿದ್ದಾರೆ.
ಕನ್ನಡದ `ಕಾಂತಾರ’ ಸಿನಿಮಾ ಇದೀಗ ಬಹುಭಾಷೆಗಳಲ್ಲಿ ರಿಲೀಸ್ ಆಗಿ, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಸಂದರ್ಶನವೊಂದರಲ್ಲಿ ಚೇತನ್ ವಿವಾದ ಬಗ್ಗೆ ರಿಷಬ್‌ಗೆ ಕೇಳಲಾಗಿದೆ. ಇದಕ್ಕೆ ಪ್ರತಿಯುತ್ತರವಾಗಿ ನೋ ಕಾಮೆಂಟ್ಸ್ ಎಂದು ಮಾತನಾಡಿದ್ದಾರೆ.
ನೋ ಕಮೆಂಟ್ಸ್. ಆದರೆ ಈ ಕಾಂತಾರ ಚಿತ್ರ ಮಾಡುವ ಯೋಚನೆ ಬಂದಾಗಲೇ ದೈವಗಳಿಗೆ, ದೈವಾರಾಧಕರ ಭಾವನೆಗಳಿಗೆ ಧಕ್ಕೆ ಆಗಬಾರದು ಎಂಬ ಎಚ್ಚರಿಕೆ ಇತ್ತು. ಹೀಗಾಗಿ ದೈವಾರಾಧಕರನ್ನು ಜೊತೆಯಲ್ಲಿ ಇಟ್ಟುಕೊಂಡು ಪ್ರತೀ ದೃಶ್ಯ ತೆಗೆಯುವಾಗಲೂ ಇದು ಸರಿಯೇ ಎಂದು ಅವರನ್ನು ಕೇಳಿ ತಿಳಿದು ಕಾಂತಾರ ಚಿತ್ರೀಕರಣ ಮಾಡಿದ್ದೆನೆ. ಇದನ್ನೂ ಓದಿ:ವಿಯೆಟ್ನಾಂನಲ್ಲೂ ಕಾಂತಾರ ಕಂಪು – ಮೊದಲ ಬಾರಿಗೆ ಕನ್ನಡ ಚಿತ್ರ ಬಿಡುಗಡೆ
ಸಂಸ್ಕೃತಿ ಬಗ್ಗೆ ಮಾತಾಡುವಷ್ಟು ಅರ್ಹತೆ ನನಗಿಲ್ಲ. ಪ್ರಶ್ನೆ ಕೇಳುವವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಪ್ರಕಾರ ಮಾತಾಡುವ ಅರ್ಹತೆ ಇರುವುದು ಆ ಸಂಸ್ಕೃತಿಯನ್ನು ಪಾಲಿಸುತ್ತಿರುವವರಿಗೆ, ದೈವರಾಧನೆ ಮಾಡುತ್ತಿರುವವರಿಗೆ. ಭೂತಕೋಲಕ್ಕೆ ಅದರದ್ದೇ ಆದ ಭವ್ಯ ಇತಿಹಾಸವಿದೆ. ಗೊತ್ತಿಲ್ಲದೇ ಅದರ ಬಗ್ಗೆ ಮಾತಾಡುವುದು ತಪ್ಪಾಗುತ್ತದೆ ಎಂದು ರಿಷಬ್ ಶೆಟ್ಟಿ ಮಾತನಾಡಿದ್ದಾರೆ.