ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ರಿಲೀಸ್‌ಗೂ ಮುನ್ನ ಸಿನಿಮಾ ಅದೆಷ್ಟು ಸದ್ದು ಮಾಡಿದ್ಯೋ ಅಷ್ಟೇ ಚಿತ್ರದ ಬುಜ್ಜಿ ವಾಹನ ಕೂಡ ಅಷ್ಟೇ ಫೇಮಸ್ ಆಗಿದೆ. ಕೆಲದಿನಗಳ ಹಿಂದೆ ನಾಗಚೈತನ್ಯ ಈ ಕಾರನ್ನು ಓಡಿಸಿ ಖುಷಿಪಟ್ಟಿದ್ದರು. ಈಗ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಕೂಡ ಓಡಿಸಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ!
- Advertisement -
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್ ಓಡಿಸುವ ಮೂರು ಚಕ್ರದ ವಾಹನದ ಹೆಸರು ಬುಜ್ಜಿ. ಭಾರಿ ಬಲಶಾಲಿಯಾಗಿರುವ ಈ ವಾಹನ `ಬುಜ್ಜಿ’ ನಾಯಕ ಪ್ರಭಾಸ್‌ಗೆ ವಾಹನ ಮಾತ್ರವಲ್ಲ, ಬೆಸ್ಟ್ ಫ್ರೆಂಡ್ ಕೂಡ. ಇದೀಗ ವಾಹನವು ಕುಂದಾಪುರಕ್ಕೆ ಬಂದಿದ್ದು, ನಟ ರಿಷಬ್ ಶೆಟ್ಟಿ ಸಹ ವಾಹನವನ್ನು ಓಡಿಸಿದ್ದಾರೆ.
- Advertisement -
- Advertisement -
ಕುಂದಾಪುರಕ್ಕೆ ಬಂದ ಬುಜ್ಜಿಗೆ ಮದ್ದಳೆ ಮೇಳದಿಂದ ರಿಷಬ್ ಶೆಟ್ಟಿಯವರು ಸ್ವಾಗತ ಕೋರಿದರು. ಬಳಿಕ ಬುಜ್ಜಿ ವಾಹನದಲ್ಲಿ ಕುಳಿತು ರೌಂಡ್ಸ್ ಹೊಡೆದಿದ್ದಾರೆ. ಬುಜ್ಜಿಯನ್ನು ಓಡಿಸಿ ಸಖತ್ ಥ್ರಿಲ್ ಆದರು. ಟೀಸರ್‌ನಲ್ಲೇ ಗೊತ್ತಾಗುತ್ತೆ ಬುಜ್ಜಿಯ ಹವಾ ಹೇಗಿದೆ ಎಂದು. ಬುಜ್ಜಿಯನ್ನು ಡ್ರೈವ್ ಮಾಡಿದ್ದು ಬಹಳ ಒಳ್ಳೆಯ ಅನುಭವ. ಆಲ್ ದಿ ಬೆಸ್ಟ್ ಬುಜ್ಜಿ ಆಂಡ್ ಭೈರವ. ಜೂನ್ 27ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಆಲ್ ದಿ ಬೆಸ್ಟ್ ಪ್ರಭಾಸ್ ಎಂದು ರಿಷಬ್ ಶೆಟ್ಟಿ ಶುಭಹಾರೈಸಿದ್ದಾರೆ.
- Advertisement -
View this post on Instagram
ಇನ್ನೂ ಚಿತ್ರದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆಯನ್ನು ಡೈರೆಕ್ಟರ್ ನಾಗ್ ಅಶ್ವೀನ್ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಟ್ರೈಲರ್ ಝಲಕ್‌ನಲ್ಲೇ ಆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಜಗತ್ತಿನ ಮೊದಲ ಪ್ರದೇಶ ಮತ್ತು ಕೊನೆಯ ಪ್ರದೇಶ ಕಾಶಿ ಎನ್ನುವ ಮೂಲಕ ಕಲ್ಕಿ ಟ್ರೈಲರ್ ಶುರುವಾಗುತ್ತೆ. ಜಗತ್ತಿನಿಂದ ಎಲ್ಲವನ್ನೂ ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲಕರ ಸಂಭಾಷೆಯಣೆಯಿದೆ. 6000 ಹಿಂದಿನ ಶಕ್ತಿ ಮತ್ತೆ ಬಂದಿದೆ. ಅಳಿವು- ಉಳಿವಿಗಾಗಿ ಹೋರಾಡುವವರ ದೃಶ್ಯ ತೋರಿಸಲಾಗಿದೆ. ಭೈರವನಾಗಿ ಯುದ್ಧಕ್ಕೆ ಪ್ರಭಾಸ್ ಸಜ್ಜಾಗಿದ್ದಾರೆ. 2 ಜಗತ್ತಿನ ಹೋರಾಟವನ್ನು ಸೈನ್ಸ್ ಫಿಕ್ಷನ್ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ.
ಯುದ್ಧದಲ್ಲಿ ಇದುವರೆಗೂ ನಾನು ಸೋತಿಲ್ಲ, ಇದನ್ನೂ ಸಹ ನಾನು ಸೋಲಲ್ಲ ಎಂದು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ, ದಿಶಾ ಪಟಾನಿ ಮಿಂಚಿದ್ದಾರೆ. ಅಮಿತಾಭ್, ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ವಿಎಫ್‌ಎಕ್ಸ್ ದೃಶ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಇದೇ ಜೂನ್ 27ಕ್ಕೆ ಸಿನಿಮಾ ರಿಲೀಸ್ ಆಗಲಿದೆ.