ನಟ ರಾಣಾ ದಗ್ಗುಭಾಟಿ (Rana Daggubati) ಟಾಲಿವುಡ್ನ (Tollywood) ಪ್ರತಿಭಾನ್ವಿತ ನಟ, ಇದೀಗ ತಮ್ಮ ಲಗೇಜ್ ನಾಪತ್ತೆ ಆಗಿರುವ ವಿಚಾರಕ್ಕೆ ರೊಚ್ಚಿಗೆದ್ದಿದ್ದಾರೆ. ಅವರ ಲಗೇಜ್ ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿರುವ ರಾಣಾ ಏರ್ಲೈನ್ಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆಗಾಗ ವಿಮಾನದಲ್ಲಿ ಪಯಣ ಮಾಡುವ ರಾಣಾ, ಇದು ಆದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
Advertisement
ಇತ್ತೀಚೆಗೆ ಇಂಡಿಗೋ (Indigo Airlines) ವಿಮಾನದಲ್ಲಿ ಪ್ರಯಾಣ ಮಾಡಿದ ರಾಣಾಗೆ ಕಹಿ ಅನುಭವ ಆಗಿದೆ. ಪ್ರಯಾಣಿಸುವಾಗ ರಾಣಾ ಅವರ ಲಗೇಜ್ ಕಳೆದು ಹೋಗಿದೆ. ಈವರೆಗೂ ಅವರ ಲಗೇಜ್ ಪತ್ತೆ ಆಗಿಲ್ಲ. ಇದೀಗ ಅವರು ನೇರವಾಗಿ ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ತನ್ನ ಅನಿಕೆಯನ್ನ ಟ್ವೀಟ್ ಮಾಡುವ ಮೂಲಕ ಇಂಡಿಗೋ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಇದರಿಂದ ಇಂಡಿಗೋ ಕಂಪನಿಗೆ ಮುಜುಗರ ಆಗಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆ ಕ್ಷಮೆ ಕೇಳಿದೆ. ಇಂಡಿಗೋ ವಿರುದ್ಧ ಗರಂ ಆಗಿರುವುದು ರಾಣಾ ಮಾತ್ರವಲ್ಲ, ಈ ಹಿಂದೆ ನಟಿ ಪೂಜಾ ಹೆಗ್ಡೆ (Pooja Hegde) ಕೂಡ ಈ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳ ವರ್ತನೆ ವಿರುದ್ಧ ಬೇಸರ ಹೊರಹಾಕಿದ್ದರು. ಇದೀಗ ರಾಣಾ ಕೂಡ ಇಂಡಿಯೋ ವಿರುದ್ಧ ರಾಂಗ್ ಆಗಿದ್ದಾರೆ.
Advertisement
Advertisement
`ಭಾರತದ ಅತ್ಯಂತ ಕೆಟ್ಟ ಏರ್ಲೈನ್ ಅನುಭವ ಇಂಡಿಗೋ. ವಿಮಾನದ ಸಮಯದ ಬಗ್ಗೆಯೂ ಯಾವುದೇ ಸುಳಿವು ಇಲ್ಲ. ಲಗೇಜ್ಗಳು ಕಾಣೆಯಾಗಿವೆ’ ಎಂದು ರಾಣಾ ದಗ್ಗುಬಾಟಿ ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್ವುಡ್ ನಟ ಮನದೀಪ್ ರಾಯ್ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
Advertisement
ಇದಾದ ಬಳಿಕ ಇಂಡಿಗೋ ಸಂಸ್ಥೆ ಅನಾನುಕುಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಲಗೇಜ್ ಅನ್ನು ಆದಷ್ಟು ಬೇಗ ನಿಮಗೆ ತಲುಪಿಸಲು ನಮ್ಮ ತಂಡ ಸಕ್ರಿಯವಾಗಿದೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಕ್ರಿಯೆ ನೀಡಿದರು. ಇಂಡಿಯೋ ಪ್ರತಿಕ್ರಿಯೆ ಬಳಿಕ ರಾಣಾ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದರು. ಆದರೆ ರಾಣಾ ಟ್ವೀಟ್ ಆಗಲೇ ಸುದ್ದಿ ಆಗಿತ್ತು. ಕೆಲ ನೆಟ್ಟಿಗರು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಇಂಡಿಯೋ ತಕ್ಷಣ ಪ್ರತಿಕ್ರಿಯೆ ನೀಡಿದೆ ಜನ ಸಾಮಾನ್ಯರ ಕಥೆ ಏನು ಪ್ರಶ್ನೆ ಮಾಡಿದ್ದಾರೆ.