ಕೊಲೆ ಕೇಸ್‌ನಲ್ಲಿ ಜೈಲುಪಾಲಾಗಿರುವ ದರ್ಶನ್ (Darshan) ಬಗ್ಗೆ ಮೊದಲ ಬಾರಿಗೆ ರಮೇಶ್ ಅರವಿಂದ್ ಮಾತನಾಡಿದ್ದಾರೆ. ಈ ಪ್ರಕರಣದಿಂದ ಹೊರಬಂದು ಹಳೆಯ ಸೂಪರ್ ಸ್ಟಾರ್ ಆಗಿ ದರ್ಶನ್‌ರನ್ನು ನೋಡಬೇಕು ಅನ್ನೋದು ನಮ್ಮ ಆಸೆ ಎಂದು ದರ್ಶನ್ ಕೇಸ್ ಬಗ್ಗೆ ನಟ ರಮೇಶ್ (Actor Ramesh Aravind) ಮಾತನಾಡಿದ್ದಾರೆ. ಇದನ್ನೂ ಓದಿ:‘ಗದಾಧಾರಿ ಹನುಮಾನ್’ ಶೀರ್ಷಿಕೆ ರಿಲೀಸ್: ರವಿ ಚಿತ್ರದ ನಾಯಕ
ಸುದ್ದಿಗೋಷ್ಠಿಯಲ್ಲಿ ರೇಣುಕಾಸ್ವಾಮಿ ಪ್ರಕರಣ (Renukaswamy Murder Case) ಕುರಿತು ರಮೇಶ್ ಅರವಿಂದ್ ಮಾತನಾಡಿ, ನನ್ನ ಕಣ್ಣಿಗೆ ಮೂವರು ದರ್ಶನ್ ಕಾಣಿಸುತ್ತಿದ್ದಾರೆ. ನಿನ್ನೆಯ ದರ್ಶನ್ ನಮಗೆ ಬಹಳ ಮಜಾ ಕೊಟ್ಟಂತಹ ಅವರ ಚಿತ್ರಗಳು, ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ಕೂತಿದ್ದ ಆ ದರ್ಶನ್ ಒಬ್ಬರು ಇದ್ದಾರೆ. ಇವತ್ತಿನ ದರ್ಶನ್ ಒಬ್ಬರು ಇದ್ದಾರೆ ಎಂದಿದ್ದಾರೆ.
ಆ ಘಟನೆಯಿಂದ ನಮ್ಮೆಲ್ಲರಿಗೂ ಬೇಸರ ಆಗಿದೆ. ಇದರಿಂದ ದೊಡ್ಡ ತಪ್ಪಾಗಿದೆ. ಈ ತಪ್ಪನ್ನು ಯಾರು ಮಾಡಿದ್ದಾರೋ ಆ ವ್ಯಕ್ತಿಗೆ ಶಿಕ್ಷೆಯಾಗುವ ಹಾಗೇ ಕಾನೂನು ನೋಡಿಕೊಳ್ಳುತ್ತದೆ. ಇದು ಎಲ್ಲಾದಕ್ಕಿಂತ ನಾಳೆಯ ದರ್ಶನ್ ಈ ಸಮಸ್ಯೆಯಿಂದ ಶಿಕ್ಷೆ ಅನುಭವಿಸಿ ಹೊರಬಂದಾಗ ಅವರು ಏನ್ಮಾಡ್ತಾರೆ ಎಂಬುದು ತುಂಬಾ ಇಂಟರೆಸ್ಟಿಂಗ್ ಆಗಿದೆ. ನೋ ಯೂ ಟರ್ನ್ ಅಂತ ಬೋರ್ಡ್ ಇರೋದು ರಸ್ತೆಯಲ್ಲಿ ಮಾತ್ರ, ಲೈಫ್‌ನಲ್ಲಿ ಆ ಬೋರ್ಡ್ ಇಲ್ಲ. ನಾವು ಯಾವಾಗ ಬೇಕಾದರೂ ಯೂ ಟೂರ್ನ್ ಮಾಡಿ ಏನು ಬೇಕಾದರೂ ಮಾಡಬಹುದು. ಹಳೆಯ ಸೂಪರ್ ಸ್ಟಾರ್ ಆಗಿ ದರ್ಶನ್‌ರನ್ನು ನೋಡಬೇಕು ಅನ್ನೋದು ನಮ್ಮ ಆಸೆಎಂದಿದ್ದಾರೆ ರಮೇಶ್.
ನಾಳೆ ಈ ತಪ್ಪಿಗೆ ಆಗಬೇಕಿರುವ ಶಿಕ್ಷೆ ಆಗೇ ಆಗುತ್ತದೆ. ಅದು ಕಾನೂನಿನ ನಿಯಮ ಕೂಡ ಅದೇ ಸತ್ಯ. ಇದರಿಂದ ಹೊರಬಂದ್ಮೇಲೆ ಚಾನ್ಸ್ ಇದೆ ಸರಿಪಡಿಸಿಕೊಳ್ಳಲು. ಮತ್ತೆ ಹಳೆಯ ದರ್ಶನ್ ನಮ್ಮ ಮನಸ್ಸಿನಲ್ಲಿ ಬರುವ ಚಾನ್ಸ್ ಇರುತ್ತೆ, ಹೇಗೆ ಅನ್ನೋದನ್ನು ಮುಂದೆ ಕಾದುನೋಡೋಣ ಎಂದು ಮಾತನಾಡಿದ್ದಾರೆ.