ಹೊಸ ಸಿನಿಮಾ ಒಪ್ಪಿಕೊಂಡ ರಾಮ್ ಪೋತಿನೇನಿ

Public TV
1 Min Read
Ram Pothineni 2

ತೆಲುಗಿನ ನಟ ರಾಮ್ ಪೋತಿನೇನಿ (Ram Pothineni) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಡಬಲ್ ಇಸ್ಮಾರ್ಟ್’ ಸಿನಿಮಾ ರಿಲೀಸ್‌ಗೂ ಮುನ್ನವೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ( Miss Shetty Mister Polishetty) ನಿರ್ದೇಶಕ ಪಿ. ಮಹೇಶ್ ಬಾಬು ಜೊತೆ ರಾಮ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ಅಜಿತ್‌ ಕುಮಾರ್‌ ಫ್ಯಾನ್ಸ್‌ಗೆ ಸಿಹಿಸುದ್ದಿ- ‌’ಗುಡ್‌ ಬ್ಯಾಡ್‌ ಅಗ್ಲಿ’ ಚಿತ್ರದ ಬಗ್ಗೆ ಅಪ್‌ಡೇಟ್

Ustad Ram Pothineni 2

ಅಭಿಮಾನಿಗಳ ಕಣ್ಣು ಇದೀಗ ‘ಡಬಲ್ ಇಸ್ಮಾರ್ಟ್’ ಚಿತ್ರದ ಮೇಲಿದೆ. ಇದರ ನಡುವೆ ಹೊಸ ಸಿನಿಮಾಗೆ ನಟ ಕೈಹಾಕಿದ್ದಾರೆ. ಡೈರೆಕ್ಟರ್ ಪಿ. ಮಹೇಶ್ ಬಾಬು ನಿರ್ದೇಶನದಲ್ಲಿ ನಟಿಸೋಕೆ ರಾಮ್ ಪೋತಿನೇನಿ ರೆಡಿಯಾಗಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ ಕಥೆ ಮೂಡಿ ಬರಲಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ ಎನ್ನಲಾಗಿದೆ. ಇದನ್ನೂ ಓದಿ:ಡಾಲಿ ನಟನೆಯ ‘ಕೋಟಿ’ ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್

ಪ್ರತಿ ಸಿನಿಮಾದಲ್ಲೂ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ನಟ ಕಾಣಿಸಿಕೊಳ್ಳುತ್ತಾರೆ. ವರ್ಷಕ್ಕೆ ಒಂದು ಸಿನಿಮಾ ಮಾಡಿದರೂ ಕಂಟೆಂಟ್ ಇರುವ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ. ಸದ್ಯ ಪುರಿ ಜಗನ್ನಾಥ್ ಜೊತೆಗಿನ ‘ಡಬಲ್ ಇಸ್ಮಾರ್ಟ್’ ಚಿತ್ರದ ಜೊತೆ ‘ಸ್ಕಂದ’ ಪಾರ್ಟ್ 2 ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟನ ಕೈಯಲ್ಲಿವೆ.

Share This Article