ಮಗುವನ್ನು ಮನೆಗೆ ಕರೆತಂದ ನಟ ರಾಮ್ ಚರಣ್-ಉಪಾಸನಾ

Public TV
2 Min Read
Ram Charan Upasana 4

ಮೂರು ದಿನಗಳ ಹಿಂದೆಯಷ್ಟೇ ನಟ ರಾಮ್ ಚರಣ್  (Ram Charan) ಅವರ ಪತ್ನಿ ಉಪಾಸನಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವನ್ನು ಮನೆಗೆ ಕರೆತರಲು ರಾಮ್ ಚರಣ್ ಕುಟುಂಬ ಕಾಯುತ್ತಿತ್ತು. ಇದೀಗ ಪತ್ನಿ ಮತ್ತು ಮಗುವನ್ನು ಮನೆಗೆ ಕರೆತಂದಿದ್ದಾರೆ ರಾಮ್ ಚರಣ್. ಮಗುವಿಗೆ ಹಾರೈಸಿದ ಎಲ್ಲರಿಗೂ ಇದೇ ಸಂದರ್ಭದಲ್ಲಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

Ram Charan Upasana 6

ಜೂನ್ 20ರಂದು ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ (Upasana) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದರು. ಈ ದಂಪತಿಯ ಪುಟಾಣಿ ಮಗುವಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Photo, Viral) ಆಗಿತ್ತು. ಮಗುವಿಗೆ ಹಾರೈಕೆಯ ಮಹಾಪುರವೇ ಹರಿದು ಬಂದಿತ್ತು.

Ram Charan Upasana 1

ಎರಡು ವಾರಗಳ ಹಿಂದೆಯಷ್ಟೇ ತಮ್ಮ ಕುಟುಂಬದ ಕುಡಿಗಾಗಿ ಶಾಪಿಂಗ್ ಮಾಡುತ್ತಿರುವ ವಿಷಯವನ್ನು ಹಾಗೂ ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ಉಪಾಸನಾ ತಿಳಿಸಿದ್ದರು. ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ. ಇದನ್ನೂ ಓದಿ:‘ಕಾಂತಾರ’ 2ಗಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಶೆಟ್ಟಿ ಬ್ಯುಸಿ

Ram Charan Upasana 2

ಈ ಹಿಂದೆ ರಾಮ್ ಚರಣ್ ತೇಜ ಅವರ ಮೊದಲ ಮಗುವಿನ ಜನನ (Childbirth) ಯಾವ ದೇಶದಲ್ಲಿ ಆಗಲಿದೆ ಎನ್ನುವ ಕುರಿತು ಚರ್ಚೆ ನಡೆದಿತ್ತು. ಅಮೆರಿಕಾದಲ್ಲೇ ಅವರು ಮೊದಲ ಮಗುವಿನ ಜನನಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಆಗಿತ್ತು. ರಾಮ್ ಚರಣ್ ಪತ್ನಿ ಉಪಾಸನಾ ಅವರ ಸಲಹೆ ಮೇರೆಗೆ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಊಹಾಪೋಹಗಳಿಗೂ ಉಪಾಸನಾ ಉತ್ತರಿಸಿದ್ದರು.

Ram Charan Upasana 3

ರಾಮ್ ಚರಣ್ ಪತ್ನಿ ಉಪಾಸನಾ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ‘ಅಮೆರಿಕಾದಲ್ಲಿ ಹೆರಿಗೆಗೆ ತಯಾರಿ ಮಾಡಿಕೊಂಡಿದ್ದೇವೆ ಎನ್ನುವ ಸುದ್ದಿ ಸುಳ್ಳು. ಅದು ಯಾಕೆ ಈ ರೀತಿ ಹಬ್ಬಿತೋ ಗೊತ್ತಿಲ್ಲ. ನಮ್ಮ ಮಗುವಿನ ಜನನ ಭಾರತದಲ್ಲೇ ಆಗಲಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದಿದ್ದಾರೆ. ಭಾರತದಲ್ಲೇ ನಮ್ಮ ಮಗು ಜನಿಸಲಿದೆ ಎಂದು ಅವರು ತಿಳಿಸಿದ್ದರು.

 

ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಡವಾಗಿ ಮಗು ಮಾಡಿಕೊಳ್ಳಲು ನಿರ್ಧರಿಸಿದ್ದರು. ಹಲವು ವರ್ಷಗಳ ನಂತರ ಉಪಾಸನಾ ಮಡಿಲಿಗೆ ಮಗು ಬರುತ್ತಿದೆ. ಹಾಗಾಗಿ ಸಹಜವಾಗಿಯೇ ದೊಡ್ಡ ಆಸ್ಪತ್ರೆಯಲ್ಲೇ ಮಗುವಿನ ಜನನ ಆಗಲಿದೆ ಎಂದು ಊಹಿಸಲಾಗಿತ್ತು. ಅಮೆರಿಕಾ ವೈದ್ಯರ ಬಗ್ಗೆ ರಾಮ್ ಚರಣ್ ಮಾತನಾಡಿದ್ದರಿಂದ, ಅಮೆರಿಕಾದಲ್ಲಿ ಮಗುವಿನ ಜನನ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಇದೆಲ್ಲದಕ್ಕೂ ಉಪಾಸನಾ ಪ್ರತಿಕ್ರಿಯಿಸಿದ್ದಾರೆ. ಕೊನೆಗೂ ತಮ್ಮದೇ ಆಸ್ಪತ್ರೆಯಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದರು.

Share This Article