ರಾಮ್ ಚರಣ್ ಎದುರು ಅಬ್ಬರಿಸಲಿದ್ದಾರೆ ವಿಜಯ್ ಸೇತುಪತಿ

Public TV
1 Min Read
ram charan 1 3

‘ಆರ್‌ಆರ್‌ಆರ್’ (RRR) ಸಿನಿಮಾ ಹೀರೋ ರಾಮ್ ಚರಣ್ (Ram Charan) ಇದೀಗ ಉಪ್ಪೇನ ನಿರ್ದೇಶಕ ಬುಚ್ಚಿ ಬಾಬು ಸನಾ ಜೊತೆ ಸಿನಿಮಾ ಮಾಡಲು ಕೈಜೋಡಿಸಿದ್ದಾರೆ. ಮೆಗಾಸ್ಟಾರ್ ಪುತ್ರನ ಮುಂದಿನ ಈ ಚಿತ್ರದಲ್ಲಿ ರಾಮ್ ಚರಣ್ ಮುಂದೆ ವಿಜಯ್ ಸೇತುಪತಿ ವಿಲನ್ ಆಗಿ ಅಬ್ಬರಿಸಲಿದ್ದಾರೆ.

ram charan

‘ಉಪ್ಪೇನ’ (Uppena) ನಿರ್ದೇಶಕನ ಹೊಸ ಚಿತ್ರಕ್ಕೆ ರಾಮ್ ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಖಳನಟನಾಗಿ ರಾಮ್ ಚರಣ್‌ಗೆ ಠಕ್ಕರ್ ಕೊಡಲು ವಿಜಯ್ ಸೇತುಪತಿ (Vijay Sethupathi) ಓಕೆ ಎಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಉಪ್ಪೇನ ಸಿನಿಮಾ ವಿಜಯ್ ನಟಿಸಿ ಗೆದ್ದಿದ್ದರು. ಈಗ ಈ ಇದೇ ಚಿತ್ರದ ನಿರ್ದೇಶಕನ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ

vijay sethupathi

ದಳಪತಿ ವಿಜಯ್, ಶಾರುಖ್ ಖಾನ್, ಕಮಲ್ ಹಾಸನ್, ತಲೈವಾ ಸಿನಿಮಾಗಳಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಹೀಗಿರುವಾಗ ಚರಣ್ ಜೊತೆ ವಿಜಯ್ ಸೇತುಪತಿ ನಟಿಸುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇಬ್ಬರ ಜುಗಲ್‌ಬಂದಿ ಹೇಗಿರಲಿದೆ ಎಂಬ ಕೌತುಕ ನಿರ್ಮಾಣವಾಗಿದೆ.

ರಾಮ್ ಚರಣ್-ವಿಜಯ್ ಕಾಂಬೋ ಸಿನಿಮಾ ಮುಂದಿನ ವರ್ಷ ಶುರುವಾಗಲಿದೆ. ಸ್ಟಾರ್ ಕಲಾವಿದರ ದಂಡು ಈ ತಂಡವನ್ನ ಸೇರಲಿದೆ. ಸದ್ಯದಲ್ಲೇ ಈ ಸಿನಿಮಾದ ಕುರಿತು ಹೆಚ್ಚಿನ ಮಾಹಿತಿ ಹೊರಬೀಳಲಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article