ರಾಜಮೌಳಿ (Rajamouli) ನಿರ್ದೇಶನದ `ಆರ್‌ಆರ್‌ಆರ್’ (RRR) ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಈ ಚಿತ್ರದ `ನಾಟು ನಾಟು’ (Naatu Naatu) ಸಾಂಗ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದೆ. ಹೀಗಿರುವಾಗ ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ (Anand Mahindra) ಕೂಡ ನಾಟು ನಾಟು ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ವಿಶೇಷ ಅಂದ್ರೆ ಸಾಂಗ್ ಸ್ಟೆಪ್ ರಾಮ್ ಚರಣ್ (Ram Charan) ಅವರೇ ಹೇಳಿಕೊಟ್ಟಿದ್ದಾರೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಳೆದ ವರ್ಷ ರಿಲೀಸ್ ಆದ `ಆರ್‌ಆರ್‌ಆರ್’ ಸಿನಿಮಾದ ಹವಾ ಇನ್ನೂ ಕಮ್ಮಿಯಾಗಿಲ್ಲ. ಚಿತ್ರದ ನಾಟು ನಾಟು ಸಾಂಗ್‌ನಲ್ಲಿ ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಈ ಸಾಂಗ್‌ನ ಸಂಗೀತ ನಿರ್ದೇಶಕ ಕೀರವಾಣಿ ಅವರು ʻನಾಟು ನಾಟುʼ ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಕೂಡ ಗೆದ್ದಿದ್ದರು.
Well apart from the race, one real bonus at the #HyderabadEPrix was getting lessons from @AlwaysRamCharan on the basic #NaatuNaatu steps. Thank you and good luck at the Oscars, my friend! pic.twitter.com/YUWTcCvCdw
— anand mahindra (@anandmahindra) February 11, 2023
ಇದೀಗ ಉದ್ಯಮಿ ಆನಂದ್ ಮಹಿಂದ್ರ ಮತ್ತು ನಟ ರಾಮ್ ಚರಣ್ ಇಬ್ಬರೂ ಹೈದರಾಬಾದ್‌ನಲ್ಲಿ ಭೇಟಿಯಾಗಿದ್ದಾರೆ. ಈವೆಂಟ್ ಒಂದರಲ್ಲಿ ಭಾಗಿಯಾಗಿದ್ದ ರಾಮ್ ಚರಣ್ ಮತ್ತು ಆನಂದ್ ಇಬ್ಬರೂ ಉತ್ತಮ ಸಮಯ ಕಳೆದಿದ್ದಾರೆ. ಆಗ `ನಾಟು ನಾಟು’ ಡಾನ್ಸ್ ಮಾಡಿದ್ದಾರೆ. ಆನಂದ್ ಮಹೀಂದ್ರಾ ಅವರು ವೀಡಿಯೋ ಹಂಚಿಕೊಂಡು ರಾಮ್ ಚರಣ್ ಜೊತೆ `ನಾಟು ನಾಟು’ ಹಾಡಿನ ಬೇಸಿಕ್ ಸ್ಟೆಪ್ ಕಲಿತೆ. ಧನ್ಯವಾದಗಳು ಮತ್ತು ಆಸ್ಕರ್‌ಗೆ ಶುಭವಾಗಲಿ ನನ್ನ ಗೆಳೆಯ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿರುವ ವಿಚಾರ ನಿಜಾನಾ? ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ
ಆನಂದ್ ಮಹೀಂದ್ರಾ ಅವರ ಟ್ವೀಟ್‌ಗೆ ರಾಮ್ ಚರಣ್ ಕೂಡ ಪ್ರತಿಕ್ರಿಯೆ ನೀಡಿ, ಆನಂದ್ ಮಹೀಂದ್ರಾ ಅವರೇ ನೀವು ನನಗಿಂತ ವೇಗವಾಗಿ ಡಾನ್ಸ್ ಮಾಡುತ್ತೀರಿ. ಅದ್ಭುತವಾದ ಫನ್ ಕ್ಷಣವಾಗಿತ್ತು. `ಆರ್‌ಆರ್‌ಆರ್’ ತಂಡಕ್ಕೆ ಶುಭಕೋರಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇಬ್ಬರ ಮಾತುಕತೆ, ಡಾನ್ಸ್ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k