`ಆರ್ಆರ್ಆರ್’ ಸಿನಿಮಾ ರಿಲೀಸ್ ಆದ ದಿನದಿಂದ ಇಂದಿನವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ದಾಖಲೆ ಮಾಡುತ್ತಲೇ ಬಂದಿದೆ. ಆಸ್ಕರ್ ವೇದಿಕೆಯಲ್ಲಿ ಇಂಡಿಯನ್ ಸಿನಿಮಾ RRR ಚಿತ್ರದ `ನಾಟು ನಾಟು’ ಹಾಡಿಗೆ ಆಸ್ಕರ್ (Oscars 2023) ಗೆದ್ದು ಬೀಗಿದೆ. ಇದೀಗ ಆಸ್ಕರ್ ಗೆದ್ದು ತಾಯ್ನಾಡಿಗೆ ವಾಪಸ್ ಆದ ರಾಮ್ ಚರಣ್ (Ram Charan) ನೋಡಲು ದೆಹಲಿ ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಮುತ್ತಿಕೊಂಡಿದ್ದಾರೆ.
- Advertisement 2-
ರಾಜಮೌಳಿ (Rajamouli) ನಿರ್ದೇಶನದ RRR ಸಿನಿಮಾ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. `ನಾಟು ನಾಟು’ ಹಾಡಿಗೆ ಓರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಗಿಟ್ಟಿಸಿಕೊಂಡಿತ್ತು. ಚಿತ್ರದಲ್ಲಿ `ನಾಟು ನಾಟು’ ಹಾಡಿಗೆ ರಾಮ್ ಚರಣ್- ಜ್ಯೂ.ಎನ್‌ಟಿಆರ್ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಇಬ್ಬರ ಸ್ಟಾರ್ಸ್ ಡ್ಯಾನ್ಸ್‌ಗೆ ಸಿನಿಪ್ರಿಯರು ಬೋಲ್ಡ್ ಆಗಿದ್ದರು. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಂಗೊಳಿಸಿದ ರಾಗಿಣಿ
- Advertisement 3-
- Advertisement 4-
ಆಸ್ಕರ್ ಸಮಾರಂಭ ಮತ್ತು ಪಾರ್ಟಿ ಮುಗಿಸಿ ಇದೀಗ ರಾಮ್ ಚರಣ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅದ್ದೂರಿ ಸ್ವಾಗತಕ್ಕೆ ಕಾದು ನಿಂತಿದ್ದರು. ಅಪಾರ ಸಂಖ್ಯೆಯ ಜನ ರಾಮ್ ಚರಣ್ ಕಾರನ್ನು ಸುತ್ತುವರೆದರು. ರಾಮ್ ಚರಣ್ ಎಂದು ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಾಮ್ ಚರಣ್ ಎಲ್ಲರತ್ತ ಕೈ ಬೀಸಿ ಕಾರಿನಲ್ಲಿ ಸಾಗಿದರು. ಚರಣ್ ಎಂಟ್ರಿ ಕೊಟ್ಟಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಮ್ ಚರಣ್ ಮತ್ತು ಪತ್ನಿ ಉಪಾಸನಾ (Upasana) ಇಬ್ಬರೂ ಬ್ಲ್ಯಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಯಲ್ಲಿ ಮುದ್ದು ನಾಯಿ ಕೂಡ ಇರುವುದು ಗಮನ ಸೆಳೆಯುತ್ತಿದೆ.
View this post on Instagram
ಈ ವೇಳೆ ರಾಮ್ ಚರಣ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಸುತ್ತುವರೆದ ಅಭಿಮಾನಿಗಳನ್ನ ಕಂಟ್ರೋಲ್ ಮಾಡೋದೇ ಪೊಲೀಸ್‌ರಿಗೆ ಹರಸಾಹಸ ಪಡುವಂತೆ ಆಗಿದೆ.