ತೆಲುಗು ನಟ ರಾಮ್ ಚರಣ್ (Ram Charan) ನಟನೆಯ ಹೊಸ ಸಿನಿಮಾ ಕೆಲಸ ಮೈಸೂರಿನಲ್ಲಿ ಆರಂಭವಾಗಿದೆ. ಚಾಮುಂಡೇಶ್ವರಿ ದರ್ಶನ ಪಡೆದು ಸ್ಕ್ರಿಪ್ಟ್ ಹಿಡಿದು ನಿಂತಿರುವ ಫೋಟೋವನ್ನು ‘ಉಪ್ಪೇನ’ ನಿರ್ದೇಶಕ ಬುಚ್ಚಿಬಾಬು ಸನಾ (Buchibabu Sana) ಸೋಶಿಯಲ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ
- Advertisement -
‘ಉಪ್ಪೇನ’ ಚಿತ್ರದಿಂದ ಸಕ್ಸಸ್ ಕಂಡಿದ್ದ ನಿರ್ದೇಶಕ ಬುಚ್ಚಿಬಾಬು ಸನಾ ಇದೀಗ ರಾಮ್ ಚರಣ್, ಜಾನ್ವಿ ಕಪೂರ್ ನಟನೆಯ ಹೊಸ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇದರ ಮೊದಲ ಹಂತದ ಶೂಟಿಂಗ್‌ಗಾಗಿ ಮೈಸೂರಿಗೆ ರಾಮ್ ಚರಣ್ ಟೀಮ್ ಆಗಮಿಸಿದೆ. ಸಾಂಸ್ಕೃತಿಕ ನಗರ ಮೈಸೂರಿಗೆ ಚಿತ್ರದ ನಿರ್ದೇಶಕ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ದೇವಿ ಸನ್ನಿಧಿಯ ಮುಂದೆ ಬುಚ್ಚಿಬಾಬು ನಿಂತಿರುವ ಫೋಟೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದು ಬಹಳ ಮಹತ್ವದ ದಿನ, ನಿರೀಕ್ಷೆಯಿಂದ ಕಾಯುತ್ತಿದ್ದ ದಿನವಿದು. ಮೈಸೂರಿನ ತಾಯಿ ಆಶೀರ್ವಾದೊಂದಿಗೆ ದಿನ ಪ್ರಾರಂಭಿಸಿದ್ದೇನೆ. ನಿಮ್ಮ ಹಾರೈಕೆಯ ಅವಶ್ಯಕತೆಯಿದೆ ಎಂದು ನಿರ್ದೇಶಕ ಬುಚ್ಚಿಬಾಬು ಸನಾ ಬರೆದುಕೊಂಡಿದ್ದಾರೆ.
It’s a BIG DAY….
The most awaited moment ????????????
Started with the blessings of Chamundeshwari Matha, Mysore ????????????????????????
Blessings needed ????????????????#RC16 pic.twitter.com/fPnEgZRxeT
— BuchiBabuSana (@BuchiBabuSana) November 22, 2024
ಇನ್ನೂ ಇದೇ ನ.25ರಂದು ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಶಿವರಾಜ್‌ಕುಮಾರ್ (Shivarajkumar) ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹಿನ್ನೆಲೆ ಅವರು ಕೂಡ ಚಿತ್ರತಂಡಕ್ಕೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರತಿಭಾವಂತರೇ ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.