`ಆರ್ಆರ್ಆರ್’ (RRR) ಸೂಪರ್ ಸಕ್ಸಸ್ ನಂತರ ಹೊಸ ಸಿನಿಮಾಗಳತ್ತ ರಾಮ್ ಚರಣ್ (Ram Charan) ಗಮನ ನೀಡ್ತಿದ್ದಾರೆ. ಸದ್ಯ ನಟ ಸಿನಿಮಾ ಬಿಟ್ಟು ಹೊಸ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಾವು ತೆರೆಮೇಲೆ ಮಾತ್ರ ಹೀರೋ ಅಲ್ಲ, ತೆರೆಹಿಂದೆ ಕೂಡ ಹೀರೋನೇ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಕ್ಯಾನ್ಸರ್ನಿಂದ (Cancer) ಬಳಲುತ್ತಿರುವ ಅಭಿಮಾನಿಯ ಕೊನೆ ಆಸೆಯನ್ನ ಈಡೇರಿಸಿದ್ದಾರೆ.
Advertisement
ಮೆಗಾಸ್ಟಾರ್ ಕುಟುಂಬ (Megastar Family) ಸಿನಿಮಾಗಳನ್ನ ಕೊಡುಗೆಯಾಗಿ ಅಷ್ಟೇ ಕೊಟ್ಟಿಲ್ಲ. ಸಾಮಾಜಿಕ ಕಾರ್ಯಗಳ ಮೂಲಕ ಅನೇಕರ ಸಂಕಷ್ಟಕ್ಕೆ ಸಾಥ್ ನೀಡಿದ್ದಾರೆ. ಹೀಗಿರುವಾಗ ನಟ ರಾಮ್ ಚರಣ್, ಪುಟ್ಟ ಅಭಿಮಾನಿಯ ಪ್ರೀತಿಗಾಗಿ ಮತ್ತು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಬಾಲಕನ ಆಸೆಯನ್ನ ಪೂರೈಸಿದ್ದಾರೆ. ಇದನ್ನೂ ಓದಿ: ಮಾಜಿ ಬಾಯ್ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ; ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್
Advertisement
#ManOfMassesRamCharan #RamCharan pic.twitter.com/TLOfszI4aP
— SivaCherry (@sivacherry9) February 9, 2023
Advertisement
9 ವರ್ಷದ ಬಾಲಕ ಮಣಿ ಕುಶಾಲ್ (Mani Kushal), ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆ. ಆತನನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ರಾಮ್ ಚರಣ್ ಅವರ ದೊಡ್ಡ ಅಭಿಮಾನಿ. ಮಣಿ ಕುಶಾಲ್ಗೆ ರಾಮ್ ಚರಣ್ ಅವರನ್ನು ಭೇಟಿ ಮಾಡಬೇಕು ಎನ್ನುವ ಆಸೆ ಇತ್ತು. ಈ ಆಸೆಯನ್ನು ಅವರು ಈಡೇರಿಸಿದ್ದಾರೆ. ಆಸ್ಪತ್ರೆಗೆ ತೆರಳಿ ಬಾಲಕನನ್ನು ಭೇಟಿಯಾಗಿ ಅವರ ಯೋಗ ಕ್ಷೇಮ ವಿಚಾರಿದ್ದಾರೆ. ಈ ಕುರಿತ ಫೋಟೋ ವೈರಲ್ ಆಗಿದೆ.
Advertisement
Through #MakeaWishFoundation our #ManOfMasses Mega Power Star @AlwaysRamCharan garu met a 9yr old kid ailing from cancer. The kid’s wish of meeting his favourite star was fulfilled with the actor spending quality time with him. #ManOfMassesRamCharan #Ramcharan pic.twitter.com/vAPMAl9VdV
— SivaCherry (@sivacherry9) February 9, 2023
ರಾಮ್ ಚರಣ್ ಅವರದ್ದು ವಿಶಾಲ ಹೃದಯ ಎಂದು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ. `ತೆರೆಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ನೀವು ಇಷ್ಟ ಆಗೋದು ಇದಕ್ಕೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ರಾಮ್ ಚರಣ್ ಬಗ್ಗೆ ಬರೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k