ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ (Saptasagaradacche Yello) ಸಿನಿಮಾ ಈಗ ತೆಲುಗು ವರ್ಷನ್‌ನಲ್ಲಿ ರಿಲೀಸ್ ಆಗಿದೆ. ಇದರ ಪ್ರಚಾರ ಕಾರ್ಯದಲ್ಲಿ ರಕ್ಷಿತ್ ಶೆಟ್ಟಿ & ಟೀಮ್ ಬ್ಯುಸಿಯಾಗಿದೆ. ಇದೀಗ ಸಂದರ್ಶನವೊಂದರಲ್ಲಿ, ರಕ್ಷಿತ್ ಮದುವೆ ಬಗ್ಗೆ ಕೇಳಲಾಗಿದೆ. ಈ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ.
ತೆಲುಗಿನ ‘ಸಪ್ತಸಾಗರಲು ದಾಟಿ’ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ, ರಕ್ಷಿತ್‌ಗೆ ಮದುವೆ (Wedding) ಬಗ್ಗೆ ಪ್ರಶ್ನೆ ಎದುರಾಗಿದೆ. ನಿಮ್ಮ ಬಗ್ಗೆ ಅತೀ ಹೆಚ್ಚು ಗೂಗಲ್ ಆಗಿರುವ ಪ್ರಶ್ನೆ ಅಂದರೆ ನಿಮ್ಮ ಮದುವೆ ಬಗ್ಗೆ. ನಿಮ್ಮ ಮದುವೆ ಯಾವಾಗ? ಎಂದು ಪ್ರಶ್ನೆ ಮಾಡಿದ್ದಾರೆ. ಖಂಡಿತವಾಗಿಯೂ ನಾನು ಮದುವೆ ಆಗುತ್ತೇನೆಂದು ಗೂಗಲ್‌ಗೆ ಗೊತ್ತಾಗುತ್ತೆ ಎಂದು ರಕ್ಷಿತ್ ಶೆಟ್ಟಿ ನಗುತ್ತಲೇ ಉತ್ತರಿಸಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತೀನಿ ಎಂದಿದ್ದಾರೆ. ಇದನ್ನೂ ಓದಿ:ಕಂಗನಾ ಅನಾರೋಗ್ಯ: 12 ತಿಂಗಳಲ್ಲಿ ಬಂದ ಕಾಯಿಲೆಗಳೆಷ್ಟು?
ಸ್ಯಾಂಡಲ್‌ವುಡ್‌ನಲ್ಲಿ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ರಕ್ಷಿತ್ ಶೆಟ್ಟಿ- ರುಕ್ಮಿಣಿ ವಸಂತ್ (Rukmini Vasanth) ಜೋಡಿ ಅಭಿಮಾನಿಗಳನ್ನ ಮೋಡಿ ಮಾಡಿದೆ.
ಹಾಗಾಗಿ ಇದೀಗ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ಸಪ್ತಸಾಗರಲು ದಾಟಿ’ ಎಂಬ ಟೈಟಲ್ ಮೂಲಕ ಟಾಲಿವುಡ್‌ನಲ್ಲಿ ಮೋಡಿ ಮಾಡಲು ಸಜ್ಜಾಗಿದೆ. ಇಂದು (ಸೆ.22) ಸಿನಿಮಾ ತೆರೆಕಂಡಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]