ಜೈಲರ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ವೇಳೆ ಅವರು ಹಿಮಾಲಯಕ್ಕೆ ಹಾರಿದ್ದರು. ಅಲ್ಲಿ ಧ್ಯಾನಕ್ಕೆ ಶರಣಾಗಿದ್ದರು. ಅಲ್ಲಿಂದ ಹೊರಟು ಇದೀಗ ಉತ್ತರ ಪ್ರದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಅಯೋಧ್ಯಗೆ (Ayodhya) ತೆರಳಿ ಶ್ರೀರಾಮನ (Sriram) ದರ್ಶನ ಪಡೆದಿದ್ದಾರೆ. ನಿರ್ಮಾಣ ಹಂತದಲ್ಲಿರುವ ದೇವಸ್ಥಾನವನ್ನೂ ಅವರು ವೀಕ್ಷಣೆ ಮಾಡಿದರು. ಡಲಿದ್ದಾರೆ.
ಮೊನ್ನೆಯಷ್ಟೇ ರಜನಿಕಾಂತ್ (Rajanikanth) ಅವರು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಭೇಟಿಯಾಗಿದ್ದರು. ನಿನ್ನೆ (ಆಗಸ್ಟ್ 19) ಜೈಲರ್ (Jailer) ಚಿತ್ರವನ್ನ ಅವರೊಂದಿಗೆ ವೀಕ್ಷಿಸಿದ್ದರು. ಲಕ್ನೋದಲ್ಲಿ ಸಿಎಂ ಮತ್ತು ಅಭಿಮಾನಿಗಳ ಜೊತೆಗೆ ‘ಜೈಲರ್’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾದ ಬೆಂಗಳೂರಿನ ಬೆಡಗಿ
ತಲೈವಾ-ಶಿವಣ್ಣ ಕಾಂಬೋ ‘ಜೈಲರ್’ (Jailer) ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತಲೈವಾ ಸಿನಿಮಾವನ್ನ ಒಪ್ಪಿ ಜನ ಮೆಚ್ಚಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರಕ್ಕಾಗಿ ಲಕ್ನೋದಲ್ಲಿ ತಲೈವಾ ಬೀಡು ಬಿಟ್ಟಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜೊತೆ ನಿನ್ನೆ ಸಂಜೆ 7ಕ್ಕೆ ‘ಜೈಲರ್’ ಸಿನಿಮಾ ನೋಡೋದು ಫಿಕ್ಸ್ ಆಗಿತ್ತು. ಅಷ್ಟೇ ಅಲ್ಲದೇ, ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರನ್ನು ಕೂಡ ತಲೈವಾ ಭೇಟಿಯಾಗಿದ್ದರು.
ಜೈಲರ್ ಸಿನಿಮಾದಲ್ಲಿ ತಲೈವಾಗೆ ಶಿವಣ್ಣ, ಮೋಹನ್ ಲಾಲ್, ಜಾಕಿ ಶ್ರಾಫ್ ಸಾಥ್ ನೀಡಿದ್ದಾರೆ. ಸಿನಿಮಾ ಕಥೆ, ಡೈಲಾಗ್, ಸಾಂಗ್ಸ್ ಎಲ್ಲವೂ ಫ್ಯಾನ್ಸ್‌ಗೆ ಮೋಡಿ ಮಾಡಿದೆ. ಆಗಸ್ಟ್ 10ಕ್ಕೆ ರಿಲೀಸ್ ಆಗಿದ್ದು, ನೂರಾರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಭರ್ಜರಿ ಕಲೆಕ್ಷನ್ ಮಾಡ್ತಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]