ಅಭಿಮಾನಿ ಕೊಟ್ಟ 10 ಗುಂಟೆ ಜಾಗದಲ್ಲಿ ರಾಜೇಶ್ ಅಂತ್ಯಕ್ರಿಯೆ

Public TV
1 Min Read
Rajesh 3

ಹಿರಿಯ ನಟ ರಾಜೇಶ್ ಅವರ ಅಂತ್ಯಕ್ರಿಯೆಯನ್ನು ಅವರ ಅಭಿಮಾನಿಯೊಬ್ಬರು ನೀಡಿದ ಹತ್ತು ಗಂಟೆ ಜಾಗದಲ್ಲಿ ನೆರವೇರಿಸಲು ಕುಟುಂಬದ ಸದಸ್ಯರು ನಿರ್ಧಾರಿಸಿದ್ದಾರೆ. ಈ ಮೊದಲು ಬೆಂಗಳೂರಿನಲ್ಲಿಯೇ ರಾಜೇಶ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸ್ಥಳವನ್ನು ಬದಲಾಯಿಸಲಾಗಿದೆ ಎಂದಿದ್ದಾರೆ ರಾಜೇಶ್ ಅವರ ಅಳಿಯ, ನಟ ಅರ್ಜುನ್ ಸರ್ಜಾ. ಇದನ್ನೂ ಓದಿ : ನಟ ರಾಜೇಶ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಂತಾಪ

actor rajesh 2
ಗೋವಿಂದಪುರದಲ್ಲಿ ವಾಸವಾಗಿರುವ ಸಿದ್ಧಲಿಂಗಯ್ಯ ಅನ್ನುವವರು ರಾಜೇಶ್ ಅವರ ಅಪ್ಪಟ ಅಭಿಮಾನಿ. ಅನೇಕ ಬಾರಿ ಸಿದ್ಧಲಿಂಗಯ್ಯನವರ ಮನೆಗೂ ಮತ್ತು ತೋಟಕ್ಕೂ ರಾಜೇಶ್ ಹೋಗಿದ್ದಾರೆ. ಒಂದೊಳ್ಳೆ ಬಾಂಧವ್ಯ ಕೂಡ ಈ ಕುಟುಂಬ ಹೊಂದಿತ್ತು. ಹಾಗಾಗಿ ಸ್ವತಃ ಸಿದ್ಧಲಿಂಗಯ್ಯನವರ ಕುಟುಂಬವೇ ರಾಜೇಶ್ ಅವರ ಕುಟುಂಬದ ಜೊತೆ ಮಾತನಾಡಿ, ಅಂತ್ಯಕ್ರಿಯೆ ಹತ್ತು ಗುಂಟೆ ಜಾಗ ಕೊಡುವುದಾಗಿ ಹೇಳಿದೆ. ಹಾಗಾಗಿ ರಾಜೇಶ್ ಅವರ ಅಂತ್ಯ ಕ್ರಿಯೆ ತುಮಕೂರು ರಸ್ತೆಯ, ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರದಲ್ಲಿ ನಡೆಯಲಿದೆ. ಇದನ್ನೂ ಓದಿ : ಪ್ರೇಮಂ ಪೂಜ್ಯಂ ಬೆಡಗಿಗೆ ಈಗ ಜೂಲಿಯಟ್

rajesh old monk 1
ರಾಜೇಶ್ ಅವರ ಅಂತ್ಯಕ್ರಿಯೆಯನ್ನು ಸರಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದಿದ್ದಾರೆ ನಟಿ ತಾರಾ. ಈ ಕುರಿತು ಅವರು ಮುಖ್ಯಮಂತ್ರಿಗಳ ಜತೆಯೂ ಮಾತನಾಡಿದ್ದಾರೆ. ರಾಜೇಶ್ ಅವರ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ತಾರಾ, ಸಕಲ ಸರಕಾರಿ ಗೌರವಗಳೊಂದಿಗೆ ರಾಜೇಶ್ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *