ಸ್ಯಾಂಡಲ್‌ವುಡ್ ನಟ ಸುದೀಪ್ ಅವರ ತಾಯಿ ಇಂದು (ಅ.20) ಬೆಳಗ್ಗೆ ನಿಧನರಾಗಿದ್ದಾರೆ. ಈ ಹಿನ್ನೆಲೆ ಸುದೀಪ್ ತಾಯಿ ಅಂತಿಮ ದರ್ಶನ ಪಡೆಯಲು ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಕುಟುಂಬ ನಟನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಅಮ್ಮನಿಲ್ಲದ ಜೀವನ ಎಷ್ಟು ಕಷ್ಟ ಅಂತ ಗೊತ್ತಿದೆ ಎಂದು ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ. ಇದನ್ನೂ ಓದಿ:BBK 11: ದೊಡ್ಮನೆಗೆ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ
ಅಂತಿಮ ದರ್ಶನದ ಬಳಿಕ ಮಾಧ್ಯಮಕ್ಕೆ ರಾಘಣ್ಣ ಮಾತನಾಡಿ, ಸುದೀಪ್ ಅವರ ತಾಯಿ, ನಮ್ಮ ತಾಯಿ ಸ್ನೇಹಿತರು. ಅವರ ಮನೆಗೆ ನಾವು ಹೋಗೋದು, ನಮ್ಮ ಮನೆಗೆ ಅವರು ಬರುತ್ತಿದ್ದರು. ನಾವು ಹೊರಗಡೆ ಹೋಗುವಾಗ ಅವರ ಆಶೀರ್ವಾದ ಪಡೆದುಕೊಳ್ಳುತ್ತಿದ್ವಿ. ಸುದೀಪ್ ಅವರನ್ನು ನೋಡಿದ್ರೆ ತುಂಬಾ ಕಷ್ಟ ಆಗುತ್ತಿದೆ. ಅಮ್ಮನಿಲ್ಲದ ಜೀವನ ಎಷ್ಟು ಕಷ್ಟ ಅಂತ ನಮಗೆ ಗೊತ್ತಿದೆ. ನಾನು ಅನುಭವಿಸಿದ್ದೇನೆ. ಸುದೀಪ್ ಆ ಕಷ್ಟ, ನೋವು ಹೇಗೆ ತೆಡೆದುಕೊಳ್ತಾರೋ ಏನೋ ಅನಿಸುತ್ತಿದೆ. ಈ ನೋವು ಭರಿಸುವ ಶಕ್ತಿಯನ್ನ ಅವರಿಗೆ ದೇವರು ಕೊಡಲಿ ಎಂದು ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ.
ಅಂದಹಾಗೆ, ಸುದೀಪ್ ತಾಯಿ ಸರೋಜಾ ಅಂತಿಮ ದರ್ಶನ ಪಡೆಯಲು ರಾಘವೇಂದ್ರ ರಾಜ್‌ಕುಮಾರ್ ಜೊತೆ ಪುತ್ರರಾದ ಯುವ, ವಿನಯ್ ಕೂಡ ಭೇಟಿ ಕೊಟ್ಟಿದ್ದಾರೆ. ಬಳಿಕ ‘ವಿಕ್ರಾಂತ್ ರೋಣ’ ಡೈರೆಕ್ಟರ್ ಅನೂಪ್ ಭಂಡಾರಿ ಕೂಡ ಆಗಮಿಸಿದ್ದಾರೆ.