ಬೆಂಗಳೂರು: ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಭಾರತದ ವಿಜಯ ಪತಾಕೆ ಹಾರಿಸಿದ್ದ ಹಿಮಾದಾಸ್ ಗೆ ಡಿಸಿಪಿ ರವಿ ಡಿ ಚನ್ನಣ್ಣನವರ್ ಮತ್ತು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ನಟ ಪುನೀತ್ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಗೂ ಡಿಸಿಪಿ ಚೆನ್ನಣ್ಣನವರ್ ಟ್ವಿಟ್ಟರ್ ಮೂಲಕ ಹಿಮಾದಾಸ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುನೀತ್ ಅವರು “ವಿಶ್ವ ಯು20 ಚಾಂಪಿನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಹಿಮಾದಾಸ್ ಗೆ ಅಭಿನಂದನೆಗಳು’ ಎಂದು ಹಿಮಾದಾಸ್ ಫೋಟೋ ಹಾಕಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಥ್ಲೀಟ್ ಹಿಮಾದಾಸ್ ಗೆ ಡಿಸಿಎಂ ಸಂಸ್ಥೆಯಿಂದ 10 ಲಕ್ಷ ಬಹುಮಾನ
Advertisement
#ಅಭಿನಂದನೆಗಳು ????????????????????
Proud Moment For India ????????#HimaDas becomes first ever Indian to win a medal at a track event in any global competition!
400m race in 51.46 sec! #IAAFWorldU20 #HistoricMoment #Congratulations #HIMA pic.twitter.com/mEAiF3D5YX
— Laxman B. Nimbargi, IPS (@DCPWestBCP) July 15, 2018
Advertisement
ಡಿಸಿಪಿ ಚನ್ನಣ್ಣನವರ್, “ಭಾರತ ಹೆಮ್ಮೆ ಪಡುವ ಕ್ಷಣಗಳಾಗಿದ್ದು, ಜಾಗತಿಕ ಸ್ಪರ್ಧೆಯಲ್ಲಿ ಮೊದಲ ಭಾರತೀಯ ಮಹಿಳೆ ಚಿನ್ನದ ಪದಕವನ್ನು ಹಿಮಾದಾಸ್ ಪಡೆದುಕೊಂಡಿದ್ದಾರೆ. ಹಿಮಾದಾಸ್ 400 ಮೀಟರ್ ಓಟವನ್ನು ಕೇವಲ 51.46 ಸೆಕೆಂಡ್ ಗಳಲ್ಲಿ ಪೂರ್ಣ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದು ಹಿಮಾದಾಸ್ ಗೆದ್ದ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.
Advertisement
ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಹಿಮಾ ದಾಸ್ ಅವರು ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದಾರೆ. ಇದೀಗ ವಿಶ್ವದಾಖಲೆ ಮರೆದು ದೇಶದ ಮನೆಮಾತಾಗಿದ್ದಾರೆ.
Advertisement
https://www.instagram.com/p/BlPsA-6ARqT/?hl=en&taken-by=puneethrajkumar.official