– ಲಾಸ್ ಆಗಿದೆ ಅನ್ನೋದಕ್ಕೆ ಬಿಸಿನೆಸ್ ಮಾಡ್ತಿದ್ದೀರಾ? – ರಾಜ್ಯ ಸರ್ಕಾರಕ್ಕೆ ನಟ ಫುಲ್ ಕ್ಲಾಸ್
ಮಂಗಳೂರು: ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್ (Congress) ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ ಎಂದು ನಟ ಪ್ರಕಾಶ್ ರಾಜ್ (Prakash Raj) ಭವಿಷ್ಯ ನುಡಿದಿದ್ದಾರೆ.
Advertisement
ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಅಭಾವ ವಿಚಾರಕ್ಕೆ ಪ್ರತಿಕ್ರಿಯಿಸಿ ಮಂಗಳೂರಿನಲ್ಲಿ (Mangaluru) ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್ ರಾಜ್
Advertisement
ನಾವು ಮೊದಲು ಯೋಚನೆ ಮಾಡಬೇಕು. ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ. ಲಾಸ್ ಆಗಿದೆ, ಹಣ ಹೊಂದಿಸಲುಆಗುತ್ತಿಲ್ಲ ಅನ್ನೋದಕ್ಕೆ ಏನ್ ಬಿಸಿನೆಸ್ ಮಾಡ್ತಿದ್ದೀರಾ? ಇದೆಲ್ಲವನ್ನ ಜನ ಗಮನಿಸಬೇಕು, ನಾವು ಎಲ್ಲಿ ತಪ್ಪುತ್ತಿದ್ದೇವೆ ಅನ್ನೋದನ್ನ ಯೋಚಿಸಬೇಕು ಎಂದು ಸಲಹೆ ನೀಡಿದರು.
Advertisement
Advertisement
ಒಂದು ಸರ್ಕಾರ ಒಂದು ದೇಶ ನಡೆಯೋದು ಪ್ರಜೆಗಳ ದುಡ್ಡಿಂದ. ಒಂದು ದೇವಸ್ಥಾನ ನಡೆಯೋದು ಪ್ರಜೆಗಳು ಹಾಕಿದ ಹುಂಡಿಯ ಹಣದಿಂದ. ಸರ್ಕಾರದಲ್ಲಿ ಯಾಕೆ ಸಾಲ ಆಗ್ತಿದೆ? ಸಾಲ ಮಾಡಿದ ಹಣ ಏನಾಗ್ತಿದೆ ಇದೆಲ್ಲವನ್ನ ನಾವು ಗಮನಿಸಬೇಕು, ಪ್ರಶ್ನಿಸಬೇಕು ಎಂದು ಹೇಳಿದರು.
ಇನ್ನೂ ಉಚಿತ ಭರವಸೆಗಳ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ಉಚಿತ ಭರವಸೆಗಳು ಪರಾವಲಂಬಿ ವರ್ಗವನ್ನಾಗಿ ಮಾಡುತ್ತೆ ಅಂದಿದೆ. ಬಡವರಿಗೆ ಕೊಡುವ ಫ್ರೀಬಿಸ್ ಹೇಗೆ ಪರಾವಲಂಬಿ ಆಗುತ್ತೆ? ಹಾಗಾದರೆ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡೋದು ಪರಾವಲಂಬಿ ಅಲ್ವಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್
ಆದ್ದರಿಂದ ಆ ಪಕ್ಷ ಈ ಪಕ್ಷ ಅನ್ನೋದನ್ನ ನೋಡದೆ ನಮ್ಮ ಹಣವನ್ನ ಸರ್ಕಾರಗಳು ಹೇಗೆ ಉಪಯೋಗಿಸುತ್ತಿವೆ? ಎಲ್ಲವನ್ನ ಪ್ರಶ್ನೆ ಮಾಡಬೇಕು. ಧರ್ಮದ ಹಿಂದೆ, ಒಂದು ಬಣ್ಣದ ಹಿಂದೆ ಹೋಗದೇ ಸರ್ಕಾರಗಳನ್ನ ಪ್ರಶ್ನಿಸಬೇಕು. ಏಕೆಂದರೆ ಗೆದ್ದ ತಕ್ಷಣ ಅವರೇನು ಮಹಾರಾಜರಲ್ಲ.. ಪ್ರಜಾ ಸೇವಕರೇ ಎಂದು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: Haveri | ಸತ್ತು ಬದುಕಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು