ಗದಗ: ಬಿಜೆಪಿ ವಿರೋಧ ಮಾಡುವವರು ಮುಧೋಳ ನಾಯಿ ನೋಡಿ ಕಲಿಯಿರಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಬಹುಭಾಷಾ ನಟ ಪ್ರಕಾಶ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.
ಗದಗ ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪ್ರಕಾಶ್ ರೈ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಮೋದಿ ಮುಧೋಳ ನಾಯಿ ಬಗ್ಗೆ ಮಾತಾಡ್ತಾರೆ. ಬಿಜೆಪಿ ವಿರೋಧಿಗಳು ಮುಧೋಳ ನಾಯಿ ನೋಡಿ ಕಲಿಬೇಕು ಅಂತಾರೆ. ಇನ್ನು ಸೈನ್ಯದಲ್ಲಿ ಮುಧೋಳ ನಾಯಿಗೆ ಕೆಲಸ ಕೊಡ್ತಾರಂತೆ. ಆದ್ರೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಾಯಿ ಮತ ಹಾಕಲ್ಲ. ಜನ ಮತ ಹಾಕ್ತಾರೆ ಅಂತ ಕಿಡಿಕಾರಿದ್ರು.
- Advertisement 2-
- Advertisement 3-
ಇಲ್ಲಿನ ನಾಯಿಗಳು ಜನರ ಪ್ರೀತಿ, ಊಟಕ್ಕಾಗಿ ಮನೆ ಕಾಯುತ್ತವೆ. ಆದ್ರೆ ಮತ ಹಾಕೋದು ರೈತರು, ಯುವಕರು. ಹೀಗಾಗಿ ನಮ್ಮ ಗತಿ ನಾಯಿ ಪಾಡು ಆಗಲು ಬಿಡಲ್ಲ ಅಂತ ಮೋದಿ ವಿರುದ್ಧ ಗರಂ ಆದ್ರು.
- Advertisement 4-
ಪ್ರಧಾನಿ ಸ್ಥಾನಕ್ಕೆ ಗೌರವ ಕೊಡಿ. ನಾವು ಮನುಷ್ಯರು ಆದ್ರೆ ಪ್ರಧಾನಿಗಳ ದೃಷ್ಠಿಯಲ್ಲಿ ನಾವು ನಾಯಿಗಿಂತ ಕಡೆಯಾದ್ವಾ ಅಂತ ಪ್ರಶ್ನಿಸಿದ್ರು. ಪ್ರಧಾನಿ ಮೋದಿ ಅವರಿಗೆ ಅಭಿವೃದ್ಧಿ ಅನ್ನೋದು ಬರಿ ಸುಳ್ಳು. ಇನ್ನು ಇದೇ ವೇಳೆ ಪ್ರಧಾನಿ ಮೋದಿ ಅವರ ಮಹದಾಯಿ ಹೇಳಿಕೆ ಹಾಗೂ ಅನಂತಕುಮಾರ್ ಹೆಗ್ಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆಗೆ ನಟ ಪ್ರಕಾಶ್ ರೈ ಕಿಡಿಕಾರಿದ್ರು.
ಇದಕ್ಕೂ ಮೊದಲು ಬಹುಭಾಷಾ ನಟ ಪ್ರಕಾಶ್ ರೈ ಗದಗ ನಗರದ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದ್ದರು. ಮಠಕ್ಕೆ ಭೇಟಿ ನೀಡಿ ವಾಪಾಸ್ ಹೊರಡೋ ವೇಳೆ ಆವರಣದಲ್ಲಿಯೇ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ರೈಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ರು.