ಟಾಲಿವುಡ್ ನಟ ಪ್ರಭಾಸ್ (Prabhas) ಮದುವೆ ಮ್ಯಾಟರ್ ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಮತ್ತೆ ಪ್ರಭಾಸ್ ಮದುವೆ (Wedding) ವಿಚಾರ ಮುನ್ನೆಲೆಗೆ ಬಂದಿದೆ. ಉದ್ಯಮಿ ಪುತ್ರಿ ಜೊತೆ ನಟನ ಮದುವೆ ನಿಶ್ಚಯವಾಗಿದೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಈ ಬಗ್ಗೆ ಪ್ರಭಾಸ್ ಆಪ್ತರು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರ ಸುಳ್ಳು ಎಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿವಣ್ಣ
ಪ್ರಭಾಸ್ ಸಿನಿಮಾಗಿಂತ ವೈಯಕ್ತಿಕ ಬದುಕಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇರುತ್ತಲೇ ಇರುತ್ತದೆ. ಪ್ರಭಾಸ್‌ಗೆ ಈಗ 45 ವರ್ಷ ಹಾಗಾಗಿ ಅವರ ಮದುವೆ ಬಗ್ಗೆ ಒಂದಲ್ಲಾ ಒಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಹೈದರಾಬಾದ್ ಉದ್ಯವಿಯ ಮಗಳೊಂದಿಗೆ ನಟನ ಮದುವೆ ಫಿಕ್ಸ್ ಆಗಿದೆ. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ ಎಂಬೆಲ್ಲಾ ಸುದ್ದಿಗೆ ಬ್ರೇಕ್ ಬಿದ್ದಿದೆ. ಇದಕ್ಕೆ ನಟನ ಆಪ್ತರು ಪ್ರತಿಕ್ರಿಯಿಸಿ, ಪ್ರಭಾಸ್ ಮದುವೆ ಆಗಲಿರುವ ವಿಚಾರ ಸುಳ್ಳು. ಇದೊಂದು ವದಂತಿ, ಇದನ್ನೇಲ್ಲಾ ನಂಬಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಸಿನಿಮಾ ರೂಪದಲ್ಲಿ ಬರುತ್ತಿದೆ ಸಿಎಂ ಯೋಗಿ ಆದಿತ್ಯನಾಥ್ ಜೀವನ ಚರಿತ್ರೆ
ಒಟ್ನಲ್ಲಿ ಪ್ರಭಾಸ್ ಮದುವೆ ಮ್ಯಾಟರ್ ಕೇಳಿ ಖುಷಿಯಾಗಿದ್ದ ಅಭಿಮಾನಿಗಳಿಗೆ ಈ ವಿಚಾರವೇ ಸುಳ್ಳು ಎಂದು ತಿಳಿದು ಬೇಸರಗೊಂಡಿದ್ದಾರೆ. ಹಾಗಾದ್ರೆ ನಟನ ಕಡೆಯಿಂದ ಮದುವೆ ಗುಡ್ ನ್ಯೂಸ್ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
ಇನ್ನೂ ‘ಕಲ್ಕಿ 2898 ಎಡಿ’ ಸಿನಿಮಾದ ಸಕ್ಸಸ್ ಬಳಿಕ ‘ದಿ ರಾಜಾ ಸಾಬ್’ (The Raja Saab) ಸಿನಿಮಾದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಈ ಚಿತ್ರದಲ್ಲಿ ಅವರು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.