ಹೊಂಬಾಳೆ ಸಂಸ್ಥೆ ನಿರ್ಮಾಣದ ‘ಸಲಾರ್’ (Salaar) ಸಿನಿಮಾ ಥಿಯೇಟರ್‌ನಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಇದೀಗ ಕಿರುತೆರೆಯಲ್ಲೂ ಪ್ರಸಾರವಾಗುತ್ತಿದೆ. ಹೀಗಿರುವಾಗ ಕೆಲ ದಿನಗಳಿಂದ ‘ಸಲಾರ್ -2’ (Salaar 2) ಸಿನಿಮಾ ನಿಂತು ಹೋಗಿದೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ವಿಚಾರವಾಗಿ ಹೊಂಬಾಳೆ ಸಂಸ್ಥೆ ಖಡಕ್ ಆಗಿ ಉತ್ತರ ನೀಡಿದೆ. ಇದನ್ನೂ ಓದಿ:ಟ್ರೋಲ್‌ಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ನೇಹಾ ಶೆಟ್ಟಿ
ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಮತ್ತು ಪ್ರಭಾಸ್ ನಡುವೆ ಭಿನ್ನಾಭಿಪ್ರಾಯವಿದೆ ಎನ್ನಲಾದ ಕೆಲ ಸುದ್ದಿಗಳು ಹರಿದಾಡಿತ್ತು. ಇದರಿಂದ ಸಲಾರ್ 2 ಸಿನಿಮಾ ನಿಂತಿದೆ ಎಂದು ಬಿಂಬಿಸಲಾಗಿತ್ತು. ಇದೀಗ ಪ್ರಶಾಂತ್ ನೀಲ್ ಮತ್ತು ನಟ ಪ್ರಭಾಸ್ (Prabhas) ಖುಷಿಯಿಂದ ಸ್ಮೈಲ್ ಮಾಡುತ್ತಿರುವ ಫೋಟೋ ಶೇರ್ ಮಾಡಿ ಹೊಂಬಾಳೆ ಟೀಮ್ ಪರೋಕ್ಷವಾಗಿ ಉತ್ತರಿಸಿದೆ.
- Advertisement
View this post on Instagram
- Advertisement
ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಒಟ್ಟಿಗೆ ಜೋರಾಗಿ ನಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದು, ಅವರು ನಗು ನಿಲ್ಲಿಸುವುದಿಲ್ಲ ಎಂದು ಬರೆಯಲಾಗಿದೆ. ಈ ಮೂಲಕ ‘ಸಲಾರ್ 2’ ನಿಂತು ಹೋಗಿದೆ ಎಂಬ ಸುದ್ದಿ ಸುಳ್ಳು ಎಂಬುದನ್ನು ಖಾತ್ರಿ ಪಡಿಸಿದೆ. ಈ ಪೋಸ್ಟ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.
ಅಂದಹಾಗೆ, ಪ್ರಭಾಸ್ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ಬ್ಯುಸಿಯಿರುವ ಕಾರಣ, ಪ್ರಶಾಂತ್ ನೀಲ್ ಅವರು ಜ್ಯೂ.ಎನ್‌ಟಿಆರ್ ನಟನೆಯ ’ಡ್ರ್ಯಾಗನ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದೇ ಆಗಸ್ಟ್‌ನಿಂದ ‘ಡ್ರ್ಯಾಗನ್’ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಚಿತ್ರ ಪೂರ್ಣಗೊಳಿಸಲು 2 ವರ್ಷಗಳು ಸಮಯ ಬೇಕಿದೆ. ಇದಾದ ಬಳಿಕ ‘ಸಲಾರ್ 2’ ಕೈಗೆತ್ತಿಕೊಳ್ಳಲಿದ್ದಾರೆ ಪ್ರಶಾಂತ್ ನೀಲ್.