ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ‘ರಾಧೆ ಶ್ಯಾಮ್’ ಸಿನಿಮಾದ ನೆಗೆಟಿವ್ ವಿಮರ್ಶೆ ಮತ್ತು ಅತೀವ ನಿರೀಕ್ಷೆ ಇಟ್ಟುಕೊಂಡಿದ್ದ ಈ ಅಭಿಮಾನಿಗೆ ಸಿನಿಮಾ ರುಚಿಸಲಿಲ್ಲ ಎನ್ನುವ ಕಾರಣಕ್ಕಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗುತ್ತಿದೆ. ಹಾಗಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ಧಾನೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್
ಕರ್ನೂಲಿನ ತಿಲಕ್ ನಗರದ 24ರ ವಯಸ್ಸಿನ ಹಾರ್ಡ್ ಕೋರ್ ಅಭಿಮಾನಿ ರವಿತೇಜ, ಬಹುತೇಕ ಪ್ರಭಾಸ್ ನಟನೆಯ ಚಿತ್ರಗಳನ್ನು ನೋಡಿಕೊಂಡು ಬೆಳೆದವನು. ಮನೆತುಂಬಾ ಪ್ರಭಾಸ್ ಚಿತ್ರಗಳನ್ನೇ ಇಟ್ಟುಕೊಂಡವನು. ರಾಧೆ ಶ್ಯಾಮ್ ಸಿನಿಮಾ ಬಿಡುಗಡೆಯ ಮುಂಚೆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದ. ಈ ಅತೀವ ನಿರೀಕ್ಷೆಯೇ ಅವನನ್ನು ಬಲಿ ತಗೆದುಕೊಂಡಿದೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್
ಪ್ರಭಾಸ್ ಅಭಿಮಾನಿಗಳು ಇಂತಹ ಹುಚ್ಚಾಟಗಳನ್ನು ಮಾಡುವುದು ಇದೇ ಮೊದಲೇನೂ ಅಲ್ಲ. ರಾಧೆ ಶ್ಯಾಮ್ ಟೀಸರ್ ಬಿಡುಗಡೆ ಬಿಳಂಬವಾದಾಗಲೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿದ್ದರು. ಬೇಗ ಸಿನಿಮಾ ರಿಲೀಸ್ ಆಗುತ್ತಿಲ್ಲ ಎಂದು ನಾನಾ ರೀತಿಯಲ್ಲಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?
ಪ್ರಭಾಸ್ ಮತ್ತು ಪೂಜಾ ಹೆಗಡೆ ಕಾಂಬಿನೇಷನ್ ನ ರಾಧೆ ಶ್ಯಾಮ್ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಅಷ್ಟೇನೂ ಕಮಾಯಿ ಮಾಡಲಿಲ್ಲ. ತಮಿಳು ಸಿನಿಮಾವೊಂದರ ಕಥೆಯನ್ನೇ ಈ ಸಿನಿಮಾ ಹೋಲುತ್ತಿದೆ ಎನ್ನುವ ಮಾತೂ ಕೇಳಿ ಬಂದಿತ್ತು.