ಸಿನಿಮಾ ರೂಪದಲ್ಲಿ ಬರಲಿದೆ ಪವನ್ ಕಲ್ಯಾಣ್ 3 ಮದುವೆ ವಿಚಾರ- ಮಾಜಿ ಪತ್ನಿ ಪ್ರತಿಕ್ರಿಯೆ

Public TV
2 Min Read
renu desai

ಟಾಲಿವುಡ್ (Tollywood) ನಟ ಪವನ್ ಕಲ್ಯಾಣ್ (Pawan Kalyan) ಮೂರು ಮದುವೆಯ (Wedding) ವಿಚಾರದ ಕುರಿತು ಸಿನಿಮಾ ಮಾಡುವುದಾಗಿ ಘೋಷಣೆ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪವನ್ ಮಾಜಿ ಪತ್ನಿ ರೇಣು ದೇಸಾಯಿ (Renu Desai) ಪ್ರತಿಕ್ರಿಯೆ ನೀಡಿದ್ದಾರೆ. ವೈಯಕ್ತಿಕ ಜೀವನವನ್ನ ಸಿನಿಮಾ ಮಾಡಬೇಡಿ ಎಂದು ರೇಣು ರಿಯಾಕ್ಟ್‌ ಮಾಡಿದ್ದಾರೆ.

Pawan Kalyan 1

ಇತ್ತೀಚೆಗೆ ಪವನ್ ಕಲ್ಯಾಣ ಮೂರು ಮದುವೆಯ ಕುರಿತು ಸಿನಿಮಾ ಮಾಡುವುದಾಗಿ ಸಚಿವ ಅಂಬಾಟಿ ರಾಮ್‌ಬಾಬು (Ambati Rambabu) ಹೇಳಿದ್ದಾರೆ. ಪವನ್ ಕಲ್ಯಾಣ್ ಅಭಿನಯದ ‘ಬ್ರೋ’ (Bro Film) ಚಿತ್ರ ಸೂಪರ್ ಹಿಟ್ ಆದ ಬೆನ್ನಲ್ಲೇ ಅವರ ಬಯೋಪಿಕ್ ಚಿತ್ರ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇದಕ್ಕೆ ಪವನ್ ಮಾಜಿ ಪತ್ನಿ ರೇಣು ದೇಸಾಯಿ ಪ್ರತಿಕ್ರಿಯಿಸಿ, ರಾಜಕೀಯ, ವೈಯಕ್ತಿಕ ದ್ವೇಷಗಳನ್ನು ನೀವು ಮುಂದುವರೆಸಿಕೊಳ್ಳಿ. ಆದರೆ ನಾನೊಬ್ಬ ತಾಯಿಯಾಗಿ ಮನವಿ ಮಾಡುತ್ತಿದ್ದೇನೆ. ನಿಮ್ಮ ರಾಜಕೀಯ, ವೈಯಕ್ತಿಕ ದ್ವೇಷಗಳ ಮಧ್ಯೆ ಮಕ್ಕಳನ್ನು ಎಳೆದು ತರಬೇಡಿ ಎಂದಿದ್ದಾರೆ. ನನ್ನ ಮಕ್ಕಳು ಮಾತ್ರವೇ ಅಲ್ಲ ಬೇರೆ ಇನ್ಯಾವುದೇ ಸೆಲೆಬ್ರಿಟಿಗಳ ಮಕ್ಕಳ ವಿಷಯವನ್ನೂ ರಾಜಕೀಯಕ್ಕೆ ಎಳೆಯಬೇಡಿ ಎಂದಿದ್ದಾರೆ. ಇದನ್ನೂ ಓದಿ:ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರ

renu desai

ನಿಮ್ಮ ರಾಜಕೀಯ ದ್ವೇಷಕ್ಕಾಗಿ ನಮ್ಮ ವೈಯಕ್ತಿಕ ಜೀವನವನ್ನು ಕೆಣಕುವುದು ಬೇಡ. ನಮ್ಮ ವೈಯಕ್ತಿಕ ಜೀವನವನ್ನು ಕಳಂಕಗೊಳಿಸುವ ಸಿನಿಮಾ ಮಾಡಬೇಡಿ. ನಮ್ಮ ವಿಚಾರ ಅದೇನೇ ಇದ್ದರೂ, ಆರಂಭದ ದಿನದಿಂದಲೂ ಅವರ ರಾಜಕೀಯ ಪಯಣಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದೇನೆ. ಪವನ್ ಕಲ್ಯಾಣ್‌ಗೆ ಜನರ ಬಗ್ಗೆ ಬಹಳ ಪ್ರೀತಿ- ಗೌರವ ಇದೆ. ಸಮಾಜವನ್ನು, ಜನರ ಜೀವನವನ್ನು ಬದಲಿಸಬೇಕು ಎಂಬ ಗುರಿಯಿದೆ. ಅದನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದಿದ್ದಾರೆ ರೇಣು ದೇಸಾಯಿ. ಈ ಮೂಲಕ ನಮ್ಮ ವೈಯಕ್ತಿಕ ಜೀವನವನ್ನು ಸಿನಿಮಾ ಮಾಡದಂತೆ ರೇಣು ಮನವಿ ಮಾಡಿದ್ದಾರೆ.

pawan kalyan

2007ರಲ್ಲಿ ನಂದಿನಿ ಎಂಬುವವರನ್ನು ಪವನ್ ಮದುವೆಯಾದರು. ಬಳಿಕ ಡಿವೋರ್ಸ್ ಮೂಲಕ ದಾಂಪತ್ಯಕ್ಕೆ ಅಂತ್ಯವಾಗಿತ್ತು. 2008ರಲ್ಲಿ ರೇಣು ದೇಸಾಯಿ ಅವರನ್ನ ವಿವಾಹವಾದರು. ನಂತರ ಈ ಮದುವೆ ಕೂಡ ಮುರಿದು ಬಿದ್ದಿತ್ತು. ರಷ್ಯಾದ ಅನ್ನಾ ಲೆಜಿನೇವಾರನ್ನು ಮದುವೆಯಾದರು. ಈ ಜೋಡಿಗೆ ಈಗ ಒಬ್ಬ ಮಗ ಮತ್ತು ಮಗಳಿದ್ದಾರೆ. ಇದನ್ನೂ ಓದಿ:ಸುದೀಪ್ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅಂಗೀಕಾರ

pawan kalyan

ಮೆಗಾಸ್ಟಾರ್ (Megastar) ಕುಟುಂಬದಲ್ಲಿ ಮದುವೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆಯಿದೆ. ಅದರಲ್ಲೂ ಪವನ್ ಕಲ್ಯಾಣ್ 3 ಮದುವೆ ಮ್ಯಾಟರ್ ಆಗಾಗ ಚಾಲ್ತಿಗೆ ಬರುತ್ತದೆ. ರಾಜಕೀಯದಲ್ಲಿ ಇದನ್ನೇ ಅಸ್ತ್ರವಾಗಿಟ್ಟುಕೊಂಡು, ಪವನ್‌ಗೆ ವಿರೋಧ ಪಕ್ಷದ ರಾಜಕಾರಣಿಗಳು ಕಾಲೆಳೆಯುತ್ತಿರುತ್ತಾರೆ. ಹೀಗಾಗಿ ಇತ್ತೀಚೆಗೆ ಪವನ್ ತಮ್ಮ ಮದುವೆಯ ಬಗ್ಗೆ ಮುಕ್ತವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

ಮೊದಲ ಮದುವೆ ಹೊಂದಾಣಿಕೆ ಆಗಲಿಲ್ಲ, ಅದಕ್ಕೇ ಎರಡನೆಯದ್ದು ಆದೆ. ಅದು ಕೂಡ ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿದ್ದವು. ಅದಕ್ಕೆ ಆ ಮದುವೆಗೂ ಅಂತ್ಯ ಹಾಡಿದೆ. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಅದರಲ್ಲಿ ತಪ್ಪೇನಿದೆ ಅಷ್ಟಕ್ಕೂ ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿಲ್ಲವಲ್ಲ. ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು? ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್ ಕಲ್ಯಾಣ್ ಬೇಸರ ವ್ಯಕ್ತಪಡಿಸಿದ್ದರು.

Share This Article