ಟಾಲಿವುಡ್ (Tollywood) ಅಂಗಳದಲ್ಲಿ ಪವನ್ ಕಲ್ಯಾಣ್ (Pawan Kalyan) ಮೂರು ಮದುವೆ ಬಗ್ಗೆ ಸಖತ್ ಸುದ್ದಿಯಾಗಿತ್ತು. ನಟನ ವೈಯಕ್ತಿಕ ಜೀವನ ಹಳ್ಳ ಹಿಡಿದಿರುವ ಬಗ್ಗೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಈಗ ಬಾಲಯ್ಯನ (Actor Balayya) ಮುಂದೆ ಮೂರು ಮದುವೆ ಬಗ್ಗೆ ಪವನ್ ಕಲ್ಯಾಣ್ ಓಪನ್ ಆಗಿ ಮಾತನಾಡಿದ್ದಾರೆ. 3 ಮದುವೆ ಗುಟ್ಟನ್ನು ಪವನ್ ಕಲ್ಯಾಣ್ ಬಿಚ್ಚಿಟ್ಟಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಸ್ಟಾರ್ ಆಗಿ ಮಿಂಚಿದವರು ಪವನ್ ಕಲ್ಯಾಣ್, ಸಿನಿಮಾ ಜೊತೆಗೆ ರಾಜಕೀಯದಲ್ಲೂ ಪವನ್ ಬೆಳಗುತ್ತಿದ್ದಾರೆ. ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಇತ್ತೀಚಿಗೆ ಬಾಲಯ್ಯ ಅವರ ನಿರೂಪಣೆಯ ಟಾಕ್ ಶೋವೊಂದರಲ್ಲಿ ನಟ ಪವನ್ ಭಾಗವಹಿಸಿದ್ದಾರೆ. ಮದುವೆ, ರಾಜಕೀಯ (Politics) ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
Advertisement
ಪವನ್ ಕಲ್ಯಾಣ್ ಎಂದಾಕ್ಷಣ ಗಾಸಿಪ್ ಪ್ರಿಯರಿಗೆ ಚರ್ಚೆಗೆ ಗ್ರಾಸವಾಗೋದೇ ಅವರ ಮದುವೆ ಮತ್ತು ಡಿವೋರ್ಸ್ ವಿಚಾರ. ಅದಕ್ಕೆಲ್ಲಾ ಪವನ್ ಕಲ್ಯಾಣ್ ಖಡಕ್ ಉತ್ತರ ಕೊಟ್ಟಿದ್ದಾರೆ. ವೈಯಕ್ತಿಕ ಜೀವನವನ್ನ ರಾಜಕೀಯಕ್ಕೆ ಹೋಲಿಸಿ ಮಾತನಾಡುವವರಿಗೂ ತಿರುಗೇಟು ನೀಡಿದ್ದಾರೆ. ಇದೀಗ ಬಾಲಯ್ಯ ನಡೆಸಿ ಕೊಡುವ ಅನ್‌ಸ್ಟಾಪೆಬಲ್ (Unstoppable Show) ಶೋನಲ್ಲಿ ಮೂರು ಮದುವೆಯಾಗಿದ್ದು ಯಾಕೆ? ಅದೆಲ್ಲ ಹೇಗಾಯಿತು ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.
Advertisement
Advertisement
ನಾನು ಜೀವನದಲ್ಲಿ ಮದುವೆಯನ್ನೇ ಆಗಬಾರದು ಎಂದು ಯೋಚಿಸಿದ್ದೆ. ಒಂಟಿಯಾಗಿರಬೇಕು ಎಂದು ಅಂದುಕೊಂಡಿದ್ದೆ, ಈಗ ಹಿಂದುರುಗಿ ನೋಡಿದರೆ ಇದು ನಾನೇನಾ ಅನ್ನಿಸುತ್ತದೆ. ಮೊದಲು ಮದುವೆಯಾದೆ ಹೊಂದಾಣಿಕೆ ಆಗಲಿಲ್ಲ, ಎರಡನೇಯದು ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿತ್ತು. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಮೂರು ಮದುವೆಯಾದೆ ಅಂತಾರಲ್ಲ. ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿದ್ದೇನಾ? ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು, ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ. ಇದನ್ನೂ ಓದಿ:ಅಭಿಮಾನಿಗೆ ಪ್ರಪೋಸ್ ಮಾಡಿದ `ಪುಷ್ಪ’ ನಟಿ ರಶ್ಮಿಕಾ ಮಂದಣ್ಣ
Advertisement
ಹೊಂದಾಣಿಕೆಯ ಕೊರತೆಯಿಂದ ಮೂರು ಸಂಬಂಧಗಳು ಮುರಿದು ಬಿತ್ತು. ನಾನು ಒಂದೇ ಸಲಕ್ಕೆ ಮೂರು ಸಲ ಮದುವೆಯಾಗಿಲ್ಲ ಎಂದು ಪವನ್ ಕಲ್ಯಾಣ್ ಖಡಕ್ ಉತ್ತರ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k