ನಿಧಿ ಜೊತೆ ಪವನ್ ಕಲ್ಯಾಣ್ ಮಸ್ತ್ ಡ್ಯಾನ್ಸ್- ‘ಹರಿ ಹರ ವೀರ ಮಲ್ಲು’ ಚಿತ್ರದ ಸಾಂಗ್ ರಿಲೀಸ್

Public TV
1 Min Read
pawan kalyan 2

ತೆಲುಗು ನಟ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ (Hari Hara Veera Mallu) ಮೊದಲ ಸಾಂಗ್ ರಿಲೀಸ್ ಆಗಿದೆ. ಕನ್ನಡತಿ ನಿಧಿ ಅಗರ್ವಾಲ್ ಜೊತೆ ಪವನ್ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.

pawan kalyan 1 1ಕ್ರಿಶ್ ಮತ್ತು ಜ್ಯೋತಿ ಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್‌ಗೆ ನಾಯಕಿಯಾಗಿ ನಿಧಿ ನಟಿಸಿದ್ದಾರೆ. ಈ ಚಿತ್ರವು ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ. ‘ಹರಿ ಹರ ವೀರ ಮಲ್ಲು ಭಾಗ 1’ರ ಮೊದಲ ಹಾಡು ರಿಲೀಸ್ ಆಗಿದೆ. ‘ತಾರಾ ತಾರಾ ನಾ ಕಲ್ಲು’ ಸಾಂಗ್‌ನಲ್ಲಿ ನಿಧಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪವನ್ ಜೊತೆಗಿನ ನಿಧಿ (Nidhhi Agerwal) ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಜೋಡಿ ಅಭಿಮಾನಿಗಳಿಗೂ ಇಷ್ಟವಾಗಿದೆ.

17ನೇ ಶತಮಾನದ ಕಥೆಯಲ್ಲಿ ಯೋಧನಾಗಿ ನಟ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಮತ್ತು ನಿಧಿ ಜೊತೆ ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

pawan kalyan 1 1ರಾಜಕೀಯದಲ್ಲಿ ಪವನ್ ಕಲ್ಯಾಣ್ ಬ್ಯುಸಿಯಿದ್ದ ಹಿನ್ನೆಲೆ ಈ ಚಿತ್ರ ಅರ್ಧಕ್ಕೆ ನಿಂತಿತ್ತು. ಕೊನೆಗೂ ಬಿಡುವು ಮಾಡಿಕೊಂಡು ‘ಹರಿ ಹರ ವೀರ ಮಲ್ಲು’ ಚಿತ್ರವನ್ನು ನಟ ಮುಗಿಸಿಕೊಟ್ಟಿದ್ದಾರೆ. ಜೂನ್ 12ರಂದು ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ.


ಈ ಚಿತ್ರದ ಜೊತೆ ಓಜಿ, ಶ್ರೀಲೀಲಾ ಜೊತೆಗಿನ ಉಸ್ತಾದ್ ಭಗತ್ ಸಿಂಗ್ ಚಿತ್ರಗಳು ಪವನ್ ಕಲ್ಯಾಣ್ ಕೈಯಲ್ಲಿದೆ.

Share This Article