ಚಿತ್ರಮಂದಿರದಲ್ಲಿ ಹುಚ್ಚು ಅಭಿಮಾನ ಪ್ರದರ್ಶಿಸಿದ ಪವನ್ ಕಲ್ಯಾಣ್ ಅಭಿಮಾನಿಗಳ ಬಂಧನ

Public TV
1 Min Read
pawan kalyan 1 2

ತೆಲುಗು ಸಿನಿಮಾರಂಗದಲ್ಲಿ ಅಪಾರ ಅಭಿಮಾನಿಗಳ ಬಳಗ ಹೊಂದಿರೋ ನಟ ಅಂದರೆ ಪವನ್ ಕಲ್ಯಾಣ್. ಸಿನಿಮಾ- ರಾಜಕೀಯ ಎರಡು ಕ್ಷೇತ್ರದಲ್ಲೂ ಪವನ್ ಕಲ್ಯಾಣ್ (Pawan Kalyan) ಛಾಪೂ ಮೂಡಿಸುತ್ತಿದ್ದಾರೆ. ಸದ್ಯ ಬ್ರೋ ಸಿನಿಮಾದ ಮೂಲಕ ಪವನ್ ಕಲ್ಯಾಣ್ ಹೈಪ್ ಕ್ರಿಯೆಟ್ ಮಾಡಿದ್ದಾರೆ. ‘ಬ್ರೋ’ (Bro Film) ಸಿನಿಮಾ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಹೀಗಿರುವಾಗ ನಟ ಪವನ್ ಅವರ ಅಭಿಮಾನಿಗಳು ಚಿತ್ರಮಂದಿರದಲ್ಲಿ ಹುಚ್ಚು ಅಭಿಮಾನ ಪ್ರದರ್ಶಿಸಿ ಈಗ ಅರೆಸ್ಟ್ ಆಗಿದ್ದಾರೆ.

Pawan Kalyan 1

ಆಂಧ್ರ ಪ್ರದೇಶದ ಪಾರ್ವತಿಪುರಂನ ಚಿತ್ರಮಂದಿರದಲ್ಲಿ ಪವನ್ ಕಲ್ಯಾಣ್‌ರ ಅಭಿಮಾನಿಗಳು ‘ಬ್ರೋ’ ಸಿನಿಮಾ ಪ್ರದರ್ಶನದ ವೇಳೆ ಸಿನಿಮಾದ ಸ್ಕ್ರೀನ್‌ಗೆ ಹಾಲಿನ ಅಭಿಷೇಕ ಮಾಡಿ ಸ್ಕ್ರೀನ್ ಅನ್ನು ಹಾಳುಗೆಡವಿದ್ದಾರೆ. ಚಿತ್ರಮಂದಿರದ ಸ್ಕ್ರೀನ್ ಅನ್ನು ಹಾಳು ಮಾಡಿದ ಕಾರಣ ಚಿತ್ರಮಂದಿರದ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಪವನ್ ಕಲ್ಯಾಣ್‌ರ ಕೆಲವು ಕಿಡಿಗೇಡಿ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ.

pawan kalyan 1 1

ಪವನ್ ಕಲ್ಯಾಣ್ ಅಭಿಮಾನಿಗಳಿಂದ ಚಿತ್ರಮಂದಿರಗಳಿಗೆ ಹಾನಿ ಆಗುತ್ತಿರುವುದು ಇದು ಮೊದಲೇನೂ ಅಲ್ಲ. ವರ್ಷದ ಹಿಂದೆ ಪವನ್‌ರ ಕಮ್‌ಬ್ಯಾಕ್ ಸಿನಿಮಾ ‘ವಕೀಲ್ ಸಾಬ್’ ಬಿಡುಗಡೆ ಆದಾಗಲೂ ಆಂಧ್ರ ಹಾಗೂ ತೆಲಂಗಾಣದಲ್ಲಿ ಪವನ್ ಅಭಿಮಾನಿಗಳು ಅಬ್ಬರ ಜಾಸ್ತಿಯಾಗಿತ್ತು. ಹಲವು ಚಿತ್ರಮಂದಿರಗಳನ್ನು ಪವನ್ ಅಭಿಮಾನಿಗಳು (Fans) ಜಖಂ ಮಾಡಿದ್ದರು.

ಪವನ್ ಕಲ್ಯಾಣ್‌ಗೆ ಆಂಧ್ರ- ತೆಲಂಗಾಣದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಸಿನಿಮಾ ಬಿಡುಗಡೆ ಆದಾಗಲೆಲ್ಲ ಅಭಿಮಾನಿಗಳು ಹೀಗೆ ದಾಂಧಲೆ ಮಾಡುವುದು ಸಾಮಾನ್ಯವಾಗಿದೆ. ಇದೀಗ ಪವನ್ ಕಲ್ಯಾಣ್‌ರ ‘ಬ್ರೋ’ ಸಿನಿಮಾ ಬಿಡುಗಡೆ ಆಗಿದೆ. ಬಿಡುಗಡೆ ಆದ ಮೊದಲ ದಿನವೇ ಸುಮಾರು 37 ಕೋಟಿ ರೂಪಾಯಿಗಳನ್ನು ‘ಬ್ರೋ’ ಸಿನಿಮಾ ಗಳಿಕೆ ಮಾಡಿದೆ. ಆದಷ್ಟು ಬೇಗ 100 ಕೋಟಿ ಹಣವನ್ನು ತಲುಪುವ ನಿರೀಕ್ಷೆಯಲ್ಲಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ಸಾಯಿ ಧರಮ್ ತೇಜ್ (Sai Dharam Tej) ಒಟ್ಟಿಗೆ ನಟಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article