ಆಂಧ್ರದಲ್ಲಿ ಮದ್ಯಪ್ರಿಯರಿಗೆ ನಟ ಪವನ್ ಕಲ್ಯಾಣ್ ಬಂಪರ್ ಆಫರ್

Public TV
2 Min Read
pawan kalyan

ಆಂಧ್ರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಗದ್ದುಗೆಗಾಗಿ ರಾಜಕೀಯ ಪಕ್ಷಗಳು ಈಗಾಗಲೇ ಗುದ್ದಾಟಕ್ಕೆ ಇಳಿದಿವೆ. ಅದಕ್ಕಾಗಿ ಮತದಾರರಿಗೆ ಬಂಪರ್ ಆಫರ್ಸ್ ಕೊಡ್ತಿದ್ದಾರೆ. ಎಲೆಕ್ಷನ್ ಗೆಲ್ಲೋಕೆ ರಾಜಕಾರಣಿಗಳು ಏನೇನೋ ತಂತ್ರ ಮಾಡ್ತಾರೆ. ಭರವಸೆ ಕೊಡ್ತಾರೆ. ಅದಕ್ಕೆ ಟಾಲಿವುಡ್ (Tollywood) ಪವರ್‌ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಕೂಡ ಹೊರತಲ್ಲ. ಯಾಕಂದ್ರೆ ಪವನ್ ಇದೀಗ ಕುಡುಕರಿಗೆ ನೀಡಿರುವ ಆಫರ್ ಹಾಗಿದೆ. ಮತದಾರರಿಗೆ ಪವನ್ ಕೊಟ್ಟ ಪವರ್ ಆಫರ್ ದೇಶಾದ್ಯಂತ ಚರ್ಚೆಯಲ್ಲಿದೆ. ಏನದು ಗೊತ್ತಾ?

Pawan Kalyan 1

ಮತ ಪಡೆಯೋಕೆ ಕುಡಿಸಿ, ತಿನ್ನಿಸಿ, ಹಣ ಹಂಚಿ ಮತ ಹಾಕಿಸಿಕೊಳ್ಳೊ ರಾಜಕಾರಣಿಗಳನ್ನ ನೋಡಿದ್ದೀವಿ. ಹೀಗ್ ಮಾಡಿದ್ಮೇಲೂ ರಾಜಕಾರಣಿಗಳು ನಾವೇ ಕುಡಿಸಿದ್ದು ಅಂತ ಹೇಳಿಕೊಳ್ಳಲ್ಲ. ಆದರೆ ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿರುವ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಮದ್ಯಪ್ರಿಯರನ್ನೇ ಬುಟ್ಟಿಗೆ ಹಾಕಿಕೊಳ್ಳುವಂಥ ಭರ್ಜರಿ ಆಫರ್ ಘೋಷಿಸಿದ್ದಾರೆ. ಅಧಿಕಾರಕ್ಕೆ ಬಂದರೆ ಮದ್ಯದ ಬೆಲೆ ಇಳಿಸುವುದಾಗಿ ಹೇಳಿದ್ದಾರೆ. ಈ ಸುದ್ದಿಗೆ ಕುಡುಕರು ಒಂದ್ ಪೆಗ್ ಹೆಚ್ಚೇ ಗಂಟಲಿಗೇರಿಸಿ ಕೇಕೆ ಹಾಕಿದ್ದಾರೆ.

pawan kalyan 1

ಆಂಧ್ರ ವಿಧಾನಸಭೆ ಚುನಾವಣೆಗಾಗಿ ಪವನ್ ಪ್ರಚಾರ ಮಾಡ್ತಿದ್ದಾರೆ. ಇತ್ತೀಚೆಗೆ ವಾರಾಹಿ ಯಾತ್ರೆಯಲ್ಲಿ ಮಾತನಾಡ್ತಾ ಕುಡುಕರಿಗೆ ಕಲ್ಲಂಗಡಿ ತಿನ್ನಿಸಿದ್ದಾರೆ. ಹಾಲಿ ಸಿಎಂ ಜಗನ್ ಅಧಿಕಾರಕ್ಕೇರೋ ಮುನ್ನ ಮದ್ಯ ಬ್ಯಾನ್ ಮಾಡೋದಾಗಿ ಹೇಳಿದ್ರು. ಹಾಗೆ ಮಾಡದೇ ಬರೀ ತೆರಿಗೆ ಹೆಚ್ಚಿಸಿ, ಶ್ರಮಿಕರಿಗೆ ಹೊರೆಯಾಗಿದ್ರು. ಫಲಿತಾಂಶ ಕಳ್ ಬಟ್ಟಿ ಕುಡಿದು ಜನ ಹಾಳಾಗುತ್ತಿದ್ದಾರೆ. ಅದಕ್ಕೆ ನಾನು ಮದ್ಯದ ಬೆಲೆ ಕಮ್ಮಿ ಮಾಡ್ತೀನಿ ಎಂದಿದ್ದಾರೆ ಪವನ್. ಕುಡುಕರಿಗೆ ಮೆಗಾ ಕರುಣೆ ತೋರಿಸಿ ಆಂಧ್ರಕ್ಕೇ ಕಿಕ್ಕೇರಿಸಿದ್ದಾರೆ. ಈ ಪರಿಣಾಮ, ನಲ್ಲಿನಲ್ಲಿಯಲ್ಲಿ ಗುಂಡು ಗಲ್ಲಿಗಲ್ಲಿಯಲ್ಲಿ ಕುಡುಕರ ದಂಡು ಶುರುವಾಗೋದು ಗ್ಯಾರೆಂಟಿ. ಇದನ್ನೂ ಓದಿ:ಗಿನ್ನಿಸ್ ಗಾಗಿ ‘ದೇವರ ಆಟ ಬಲ್ಲವರಾರು’ ಟೀಮ್ ಮಾಡಿದ್ದೇನು?

ಈ ವರ್ಷ ಕರ್ನಾಟಕದಲ್ಲಿ ಸಿಎಂ ಪಟ್ಟಕ್ಕಾಗಿ ಗದ್ದುಗೆ ಗುದ್ದಾಟ ಜೋರಾಗಿತ್ತು. ಸಾಕಷ್ಟು ಬಂಪರ್ ಆಫರ್‌ಗಳನ್ನ ನೀಡಿ, ಮತದಾರರಿಗೆ ಕಾಂಗ್ರೆಸ್ ಪಕ್ಷ ಮನವೊಲಿಸಿತ್ತು. ಅದರಲ್ಲಿ ಯಶಸ್ವಿ ಕೂಡ ಆದರು. ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಚಾಲ್ತಿಯಲ್ಲಿದೆ. ಈ ಬೆನ್ನಲ್ಲೇ ಆಂಧ್ರ ವಿಧಾನಸಭೆ ಎಲೆಕ್ಷನ್ ಭರಾಟೆ ಜೋರಾಗಿದೆ. ಸಿಎಂ ಪಟ್ಟ ಯಾರಿಗೆ ಸಿಗಲಿದೆ ಎಂಬುದನ್ನ ಕಾಯಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article