ಜ.22 ರಂದು ಅಯೋಧ್ಯೆಗೆ ಹೋಗುತ್ತಿದ್ದು, ಬರ್ತ್‌ ಡೇ ಆಚರಿಸಿಕೊಳ್ತಿಲ್ಲ: ನಿಖಿಲ್‌

Public TV
1 Min Read
NIKHIL KUMARASWAMY

ರೋಬ್ಬರಿ 500 ವರ್ಷಗಳ ಹೋರಾಟ ಅಯೋಧ್ಯೆಯ ರಾಮಮಂದಿರದಲ್ಲಿ ಅಂತ್ಯಗೊಂಡಿದೆ. ಇದರಂತೆ ಜನವರಿ 22ರ ಸೋಮವಾರದ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಆಹ್ವಾನಿತರಲ್ಲಿ ಕೆಲವರು ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಇವರಲ್ಲಿ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಕೂಡ ಒಬ್ಬರಾಗಿದ್ದಾರೆ.

ಹೌದು. ಜನವರಿ 22 ರಂದೇ ನಟ ನಿಖಿಲ್‌ ಕುಮಾರಸ್ವಾಮಿಯವರ ಹುಟ್ಟುಹಬ್ಬವಾಗಿದೆ (Nikhil Birthday). ಹೀಗಾಗಿ ಇದೇ ದಿನ ನಿಖಿಲ್‌ ಅಯೋಧ್ಯೆಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಪತ್ರವನ್ನು ಬರೆದಿದ್ದು, ಅದರಲ್ಲಿ ಮಾಹಿತಿ ಹಂಚಿಕೊಂಡು ಕ್ಷಮೆ ಕೇಳಿದ್ದಾರೆ.

ಪತ್ರದಲ್ಲೇನಿದೆ..?: ಜನವರಿ 22 ರಂದು ನನ್ನ ಹುಟ್ಟುಹಬ್ಬವಾಗಿದ್ದು, ಈ ದಿನ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕ್ಷಮೆ ಇರಲಿ ಎಂದಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನ ‘ರಾಮಾಯಣ’ ಪ್ರಸಾರಕ್ಕೆ ಸಿದ್ಧತೆ

nikhil kumaraswamy 3

ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಬೇಕಿದೆ. ಹೀಗಾಗಿ ನೀವೆಲ್ಲರೂ ನೀವಿದ್ದ ಕಡೆಯಿಂದಲೇ ನನ್ನ ಹುಟ್ಟುಹಬ್ಬಕ್ಕೆ ಹರಸಿದರೆ ಅದೇ ನನಗೆ ಸಂತೋಷ. ನನ್ನ ಹುಟ್ಟುಹಬ್ಬಕ್ಕಾಗಿ ಯಾವುದೇ ರೀತಿಯ ದುಂದುವೆಚ್ಚ ಬೇಡ. ಅದನ್ನೇ ಒಳ್ಳೆಯ ಕಾರ್ಯಕ್ಕೆ ಬಳಸಿ. ಮತ್ತೊಮ್ಮೆ ನಿಮ್ಮ ಬಳಿ ಕ್ಷಮೆ ಕೇಳುತ್ತಾ ಆದಷ್ಟು ಬೇಗ ಭೇಟಿ ಮಾಡೋಣ ಎಂದಿದ್ದಾರೆ.

ಒಟ್ಟಿನಲ್ಲಿ ರಾಮಂದಿರದ ಕಾರ್ಯಕ್ರಮದಲ್ಲಿ ಭಾಗಿ ಆಗ್ತಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆಗೆ ನಿಖಿಲ್‌ ಅವರು ಬ್ರೇಕ್ ಹಾಕಿದ್ದಾರೆ.

Share This Article