ಟ್ರಂಕ್ (Trunk), ವಿಜಯಾನಂದ (Vijayananda) ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ಜೋಡಿ ನಿರ್ದೇಶಕಿ ರಿಷಿಕಾ ಶರ್ಮಾ (Rishika Sharma) ಹಾಗೂ ನಟ ನಿಹಾಲ್ (Nihal) ಫೆಬ್ರವರಿ 15ರಂದು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ಮದುವೆ (Marriage) ತಯಾರಿ ಮಾಡಿಕೊಂಡಿದ್ದಾರೆ. ಹತ್ತು ವರ್ಷಗಳ ಸ್ನೇಹಕ್ಕೆ ಸತಿಪತಿ ಸ್ಥಾನ ನೀಡುತ್ತಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಮತ್ತೊಂದು ಮದುವೆಗೆ ಸಿದ್ಧವಾಗಿದೆ.
ಈ ಕುರಿತು ರಿಷಿಕಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, ‘ನಿಮ್ಮೆಲ್ಲರೊಂದಿಗೆ ಒಂದು ಖುಷಿ ಸುದ್ದಿಯನ್ನು ಹಂಚಿಕೊಳ್ಳುವುದಕ್ಕೆ ನಾನು ಎಕ್ಸೈಟ್ ಆಗಿದ್ದೇನೆ. ನಿಹಾಲ್ ಅವರೊಂದಿಗೆ ನಾನು ಇದೇ ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದೇನೆ. ನಮ್ಮ ಸುಂದರ ಲವ್ ಸ್ಟೋರಿ ಸೃಷ್ಟಿಯಾಗಲು ಲಕ್ಷಾಂತರ ಸಣ್ಣ ಕ್ಷಣಗಳಿವೆ. ನಮ್ಮ ಸಂತೋಷದಾಯಕ ಮತ್ತು ಅರ್ಥಪೂರ್ಣ 9 ವರ್ಷಗಳ ಸ್ನೇಹ ಮತ್ತು ಪ್ರೀತಿಗೆ ದಾರಿಯಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಖ್ಯಾತ ನಟ ನಿತಿನ್ ಪಾಲಾದ ‘ಕಬ್ಜ’ ಸಿನಿಮಾದ ಆಂಧ್ರ-ತೆಲಂಗಾಣ ಹಕ್ಕು
2018ರಲ್ಲಿ ತೆರೆಕಂಡ ಟ್ರಂಕ್ ಸಿನಿಮಾಗೆ ರಿಷಿಕಾ ನಿರ್ದೇಶಕಿಯಾಗಿದ್ದರೆ, ನಿಹಾಲ್ ನಟ. ವಿಮರ್ಶಕರಿಂದ ಮೆಚ್ಚುಗೆ ಪಡೆದ ಸಿನಿಮಾ ಇದಾಗಿತ್ತು. ನಾಲ್ಕು ವರ್ಷಗಳ ಸತತ ಶ್ರಮದ ಪರಿಣಾಮ ಭಾರೀ ಬಜೆಟ್ ಸಿನಿಮಾ ‘ವಿಜಯಾನಂದ’ದಲ್ಲಿ ಮತ್ತೆ ಈ ಜೋಡಿ ಒಂದಾಗಿತ್ತು. ಈ ಸಿನಿಮಾದಲ್ಲೂ ನಿಹಾಲ್ ಹೀರೋ. ರಿಷಿಕಾ ನಿರ್ದೇಶಕಿ. ಈ ಎರಡೂ ಚಿತ್ರಗಳು ಅವರ ವೃತ್ತಿ ಬದುಕಿಗೆ ಸಾಕಷ್ಟು ಹೆಸರು ತಂದುಕೊಟ್ಟವು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k