ಸನ್ನಿ ಡಿಯೋಲ್ ನಟನೆಯ ‘ಗದರ್ 2’ (Gadar 2) ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಜನಮನ್ನಣೆ ಗಳಿಸಿದೆ. ಹೀಗಿರುವಾಗ ಗದರ್ 2 ಚಿತ್ರದ ಬಗ್ಗೆ ಬಾಲಿವುಡ್‌ನ ಖ್ಯಾತ ನಟ ನಸೀರುದ್ದೀನ್ ಶಾ (Naseeruddin Shah) ಟೀಕಿಸಿದ್ದಾರೆ. ಈ ರೀತಿಯ ಸಿನಿಮಾಗಳು ಸಮಾಜಕ್ಕೆ ಹಾನಿಕರ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:‘ಛೂಮಂತರ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ರವಿಚಂದ್ರನ್
ಇತ್ತೀಚಿನ ಸಂದರ್ಶನವೊಂದರಲ್ಲಿ ಸನ್ನಿ ಡಿಯೋಲ್ (Sunny Deol) ನಟನೆಯ ಗದರ್ 2 (Gadar 2) ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅತಿಯಾದ ದೇಶಪ್ರೇಮ ಅಪಾಯಕಾರಿ. ಸಿನಿಮಾದ ಜನಪ್ರಿಯತೆ ಅನ್ನೋದು ಇದರಿಂದಲೇ ಪ್ರೇರಿತಗೊಂಡಿದೆ. ಇಂದು ನಿಮ್ಮ ದೇಶವನ್ನು ಪ್ರೀತಿಸಿದರೆ ಸಾಕಾಗುವುದಿಲ್ಲ, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕು. ದಿ ಕೇರಳ ಸ್ಟೋರಿ, ಗದರ್ 2 ಚಿತ್ರಗಳು ಸಾಕಷ್ಟು ಹಾನಿಕರ. ನಾನು ಆ ಚಿತ್ರಗಳನ್ನು ನೋಡಿಲ್ಲ. ಆದರೆ, ಅವು ಯಾವ ವಿಚಾರದ ಬಗ್ಗೆ ಇದೆ ಅನ್ನೋದು ಗೊತ್ತಿದೆ ಎಂದಿದ್ದಾರೆ.
Advertisement
‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಕಮಾಯಿ ಮಾಡಿತ್ತು. ಕೇರಳದ ಯುವತಿಯರನ್ನು ಮತಾಂತರ ಮಾಡಿ ಉಗ್ರ ಸಂಘಟನೆಗೆ ಅವರನ್ನು ಸೇರಿಸುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಇದು ನೈಜ ಘಟನೆ ಆಧಾರಿತ ಎಂದು ತಂಡ ಹೇಳಿಕೊಂಡಿತ್ತು. ಅಂದು ಚಿತ್ರವನ್ನು ನಸೀರುದ್ದೀನ್ ಶಾ (Naseeruddin Shah) ಟೀಕಿಸಿದ್ದರು.
Advertisement
Advertisement
‘ಗದರ್ 2’ ಚಿತ್ರದ ಕಥೆಯೂ ಭಾರತ – ಪಾಕಿಸ್ತಾನ ಕುರಿತು ಒಳಗೊಂಡ ಕಥೆಯಾಗಿದೆ. ಮಗನ ರಕ್ಷಣೆಗೆ ಪಾಕಿಸ್ತಾನಕ್ಕೆ ತೆರಳುವ ತಂದೆಯಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಾರೆ. ನಾಯಕಿಯಾಗಿ ಅಮೀಷಾ ಪಟೇಲ್ ನಟಿಸಿದ್ದಾರೆ. ಅಂದಹಾಗೆ ಇತ್ತೀಚಿಗೆ ಚಿತ್ರತಂಡ ಸಕ್ಸಸ್ ಪಾರ್ಟಿ ಕೂಡ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿತ್ತು.
Advertisement