ತೆಲುಗು ನಟ ನರೇಶ್ (Naresh) ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಸದ್ದಿಲ್ಲದೇ ದುಬೈಗೆ (Dubai) ಹಾರಿದ್ದಾರೆ. ಕೆಲ ದಿನಗಳ ಕಾಲ (Honeymoon) ದುಬೈನಲ್ಲಿ ಈ ಜೋಡಿ ಕಳೆದಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಿನ್ನೆಯಷ್ಟೇ ಮದುವೆ (Marriage) ಆಗಿದ್ದೇವೆ ಎನ್ನುವ ಅರ್ಥದಲ್ಲಿ ವಿಡಿಯೋ ಶೇರ್ ಮಾಡಿದ್ದ ನರೇಶ್, ಇಂದು ಅವರು ದುಬೈನಲ್ಲಿ ಕಾಲ ಕಳೆದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ದುಬೈನ ಬೇರೆ ಬೇರೆ ಸ್ಥಳಗಳಲ್ಲಿ ಸೆರೆ ಹಿಡಿಯಲಾದ ಫೋಟೋಗಳು ಕೂಡ ಹಂಚಿಕೆಯಾಗಿವೆ.
Advertisement
ಹೊಸ ವರ್ಷದ ದಿನದಂದು ಪವಿತ್ರಾ ಲೋಕೇಶ್ ತುಟಿಗೆ ಮುತ್ತಿಡುವ ಮೂಲಕ ತಾವು ಮದುವೆ ಆಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು ತೆಲುಗು ನಟ ನರೇಶ್. ಅದೊಂದು ಮದುವೆಯ ಆಮಂತ್ರಣ ಎನ್ನುವಂತೆ ವಿಡಿಯೋ ಮಾಡಿದ್ದರು. ಈ ವಿಡಿಯೋ ರಿಲೀಸ್ ಆಗಿ ಕೆಲವು ದಿನಗಳ ನಂತರ, ಅದೊಂದು ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ವಿಡಿಯೋ ಎಂದು ಹೇಳಲಾಯಿತು. ಈ ವಿಚಾರವಾಗಿ ನರೇಶ್ ಪತ್ನಿ ರಮ್ಯಾ ಗರಂ ಕೂಡ ಆದರು. ಇದೀಗ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ನರೇಶ್. ಇದನ್ನೂ ಓದಿ: ರೆಟ್ರೋ ಲುಕ್ನಲ್ಲಿ ಕಂಗೊಳಿಸಿದ ರಕ್ಷಿತ್ ಶೆಟ್ಟಿ ನಾಯಕಿ
Advertisement
Advertisement
ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಅವರನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಂಡಿದ್ದಾರೆ ನರೇಶ್. ಸಪ್ತಪದಿ ತುಳಿಯುವುದರಿಂದ ಹಿಡಿದ ಮದುವೆಯಲ್ಲಿ ಮಾಡಬಹುದಾದ ಎಲ್ಲ ಸಂಪ್ರದಾಯಗಳನ್ನು ಮಾಡಿದ್ದಾರೆ. ಆ ಕ್ಷಣಗಳನ್ನು ವಿಡಿಯೋ ಮಾಡಿ, ಅದನ್ನು ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ನಿಜವಾಗಿಯೂ ನರೇಶ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.
Advertisement
ನರೇಶ್ ಆಪ್ತರ ಪ್ರಕಾರ ಇನ್ನೂ ನರೇಶ್ ಅವರಿಗೆ ಡಿವೋರ್ಸ್ ಸಿಕ್ಕಿಲ್ಲ. ಪತ್ನಿ ರಮ್ಯಾ ವಿಚ್ಛೇದನ ನೀಡುವುದಿಲ್ಲವೆಂದು ಘೋಷಿಸಿದ್ದಾರೆ. ಡಿವೋರ್ಸ್ ಸಿಗದೇ ನರೇಶ್ ಮದುವೆ ಆಗುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಆಗಿದ್ದರೆ ಅದಕ್ಕೆ ಮಾನ್ಯತೆ ಇಲ್ಲ. ಅಲ್ಲದೇ ಅದೊಂದು ಅಪರಾಧ ಕೂಡ ಆಗಲಿದೆ. ಈ ಮದುವೆ ವಿರುದ್ಧ ರಮ್ಯಾ ಕೋರ್ಟ್ ಮೆಟ್ಟಿಲು ಹತ್ತಬಹುದು. ಇಷ್ಟೆಲ್ಲ ನರೇಶ್ ಅವರಿಗೂ ಗೊತ್ತಿದೆ, ಪವಿತ್ರಾ ಲೋಕೇಶ್ ಅವರಿಗೂ ಗೊತ್ತಿದೆ. ಇಷ್ಟಿದ್ದೂ ಮದುವೆಯಾದರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.
ಈ ಮದುವೆ ವಿರುದ್ಧ ರಮ್ಯಾ ಕೋರ್ಟಿಗೆ ಹೋದರೆ, ಅದು ಸಿನಿಮಾಗಾಗಿ ತಗೆದಿರುವ ದೃಶ್ಯವೆಂದು ಹೇಳಿ ಬಚಾವ್ ಆಗಬಹುದು. ರಮ್ಯಾ ಸುಮ್ಮನಾದರೆ ಅದನ್ನೇ ಮದುವೆ ಎಂದು ಅಂದುಕೊಳ್ಳಬಹುದು ಎನ್ನುವ ಮಾತುಗಳು ಕೂಡ ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ನರೇಶ್, ಈ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಭಾರೀ ಸುದ್ದಿಯಂತೂ ಮಾಡಿದ್ದಾರೆ.