ತೆಲುಗು ನಟ ನರೇಶ್ (Naresh) ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಇಬ್ಬರೂ ಕಲಾವಿದರು ಮದುವೆಯಾಗಿರುವ (Marriage) ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಜೀವನ ಪರ್ಯಂತ ಖುಷಿಯಾಗಿರಲು ಶುಭ ಹಾರೈಸಿ ಎಂದು ಕೇಳಿಕೊಂಡಿದ್ದಾರೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.
Advertisement
ಪವಿತ್ರಾ ಲೋಕೇಶ್ ಮೇಲೆ ಒಲವಿರುವ ಕುರಿತು ನರೇಶ್ ಈ ಹಿಂದೆ ಹಲವಾರು ಬಾರಿ ಹೇಳಿದ್ದಾರೆ. ಪವಿತ್ರಾ ಲೋಕೇಶ್ ಮತ್ತು ನರೇಶ್ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ ಎಂದು ನರೇಶ್ ಪತ್ನಿ ರಮ್ಯಾ ಆರೋಪ ಕೂಡ ಮಾಡಿದ್ದರು. ಅಲ್ಲದೇ, ಹೊಸ ವರ್ಷದ ದಿನದಂದು ತಾವು ಮದುವೆ ಆಗಲಿದ್ದೇವೆ ಎಂದು ಸ್ವತಃ ನರೇಶ್ ಅವರು ವಿಡಿಯೋವೊಂದನ್ನು ಹಾಕುವ ಮೂಲಕ ಹೇಳಿದ್ದರು. ಈಗ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡಿ ತಲೆಗೆ ಹುಳು ಬಿಟ್ಟಿದ್ದಾರೆ.
Advertisement
Advertisement
ಮೂಲಗಳ ಪ್ರಕಾರ ಪವಿತ್ರಾ ಮತ್ತು ಲೋಕೇಶ್ ಅವರ ಲವ್ ಸ್ಟೋರಿಯನ್ನೇ ಸಿನಿಮಾ ಮಾಡಲಾಗುತ್ತಿದೆ. ಆ ಸಿನಿಮಾದಲ್ಲಿ ಪವಿತ್ರಾ ನಾಯಕಿ, ನರೇಶ್ ನಾಯಕ. ಇಬ್ಬರ ಬದುಕಿನಲ್ಲಿ ನಡೆದ ಘಟನೆಗಳನ್ನೇ ಚಿತ್ರಕಥೆಯಾಗಿಸಿದ್ದಾರಂತೆ ನಿರ್ದೇಶಕರು. ಆ ಸಿನಿಮಾದಲ್ಲಿ ಇಬ್ಬರೂ ಮದುವೆ ಆಗುವ ಸನ್ನಿವೇಶ ಕೂಡ ಇದೆಯಂತೆ. ಸದ್ಯ ಹರಿಬಿಟ್ಟಿರುವ ವಿಡಿಯೋ ಕೂಡ ಸಿನಿಮಾದ ದೃಶ್ಯವೆಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮುಂಬೈನಲ್ಲಿ ‘ಕಬ್ಜ’ ಹವಾ : ಬಾಲಿವುಡ್ ನಲ್ಲಿ ಉಪೇಂದ್ರ, ಸುದೀಪ್ ರೋಡ್ ಶೋ
Advertisement
ನರೇಶ್ ಹಂಚಿಕೊಂಡಿರುವ ಮದುವೆ ವಿಡಿಯೋಗೆ ಅನೇಕರು ಶುಭಾಶಯ ತಿಳಿಸಿದ್ದಾರೆ. ನೆಗೆಟಿವ್ ಕಾಮೆಂಟ್ ಗಳು ಕೂಡ ಬಂದಿವೆ. ಗೊಂದಲ ಆಗುವಂತೆ ನರೇಶ್ ಬರೆದುಕೊಂಡಿದ್ದರಿಂದ ‘ಇದು ರಿಯಲ್ ಸ್ಟೋರಿನಾ? ರೀಲ್ ಸ್ಟೋರಿನಾ?’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದಕ್ಕೆ ಅವರಿಬ್ಬರೇ ಉತ್ತರ ಕೊಡಬೇಕಿದೆ. ಮುಂದಿನ ದಿನಗಳಲ್ಲಿ ಈ ವಿಡಿಯೋ ಅಸಲಿ ಬಣ್ಣವನ್ನು ಅವರೇ ಬಯಲು ಮಾಡಬಹುದು.