ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗಿನಲ್ಲಿ ಶುರುವಾಗಿದೆ. ನಾಗಾರ್ಜುನ ನಿರೂಪಣೆಯಲ್ಲಿ ದೊಡ್ಮನೆ ಆಟ ಅದ್ದೂರಿಯಾಗಿ ಓಪನಿಂಗ್ ಪಡೆದಿದೆ. ಇದೀಗ ಬಿಗ್ ಬಾಸ್ ವೇದಿಕೆಗೆ ವಿಜಯ್ ದೇವರಕೊಂಡ (Vijay Devarakonda) ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಬಳಿ, ಸಮಂತಾ ಎಲ್ಲಿ ಎಂದು ಮಾಜಿ ಸೊಸೆ ಬಗ್ಗೆ ನಾಗಾರ್ಜುನ ಕೇಳಿದ್ದಾರೆ.
ತೆಲುಗು ಬಿಗ್‌ಬಾಸ್ 7 ಇಂದು ಅಧಿಕೃತವಾಗಿ ಪ್ರಾರಂಭವಾಗುತ್ತಿದೆ. ಶೋ ಓಪನಿಂಗ್‌ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸ್ಪರ್ಧಿಗಳು ಮನೆ ಒಳಗೆ ಸೇರಿದ್ದಾರೆ. ಆ ಎಪಿಸೋಡ್‌ನ ಪ್ರಸಾರ ಇಂದು (ಸೆಪ್ಟೆಂಬರ್ 3) ಆಗಲಿದೆ. ನಟ ವಿಜಯ್ ‘ಖುಷಿ’ (Kushi) ಸಿನಿಮಾದ ಪ್ರಚಾರಕ್ಕೆ ಬಿಗ್ ಬಾಸ್ ವೇದಿಕೆಗೆ ಹೋಗಿದ್ದಾರೆ.
ಅಲ್ಲಿ ನಾಗಾರ್ಜುನ (Nagarjuna) ಅವರೊಟ್ಟಿಗೆ ತಮ್ಮ ‘ಖುಷಿ’ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದಾರೆ. ಈ ವೇಳೆ, ಸಿನಿಮಾದ ನಾಯಕಿ ಸಮಂತಾ(Samantha) ಬಗ್ಗೆ ನಾಗಾರ್ಜುನ, ವಿಜಯ್ ದೇವರಕೊಂಡ ಅವರ ಬಳಿ ಪ್ರಶ್ನೆ ಮಾಡಿದ್ದಾರೆ. ಸಮಂತಾ ಎಲ್ಲಿ ಎಂದು ವಿಚಾರಿಸಿದ್ದಾರೆ. ಅದಕ್ಕೆ ವಿಜಯ್ ಏನು ಉತ್ತರ ಕೊಟ್ಟರು ಎಂಬಿತ್ಯಾದಿ ಮಾಹಿತಿ ಎಪಿಸೋಡ್ ಪ್ರಸಾರವಾದ ಬಳಿಕವೇ ತಿಳಿಯಲಿದೆ. ಇದನ್ನೂ ಓದಿ:ಸೀರೆಯುಟ್ಟು ಅಪ್ಸರೆಯಂತೆ ಕಂಗೊಳಿಸಿದ ‘ಗೌರಿ’ ಸಾನ್ಯ ಅಯ್ಯರ್
ನಾಗಚೈತನ್ಯ- ಸಮಂತಾ ಹಲವು ವರ್ಷಗಳು ಪ್ರೀತಿಸಿ ಗುರುಹಿರಿಯರ ಸಮ್ಮತಿಯ ಮೇರೆಗೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವೈಯಕ್ತಿಕ ಮನಸ್ತಾಪಗಳಿಂದ ಈ ಜೋಡಿ 2 ವರ್ಷಗಳ ಹಿಂದೆ ಬೇರೆಯಾದರು. ಈಗ ಇಬ್ಬರು ಸಿನಿಮಾ ಕೆರಿಯರ್‌ನತ್ತ ಮುಖ ಮಾಡಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]