ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಶುರುವಾಗಲು ದಿನಗಣನೆ ಆರಂಭವಾಗಿದೆ. ಇದರ ನಡುವೆ ತೆಲುಗಿನ ಬಿಗ್ ಬಾಸ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದೇ ಸೆಪ್ಟೆಂಬರ್‌ನಿಂದ ತೆಲುಗಿನ ಬಿಗ್ ಬಾಸ್ ಸೀಸನ್- 8 (Bigg Boss Telugu 8) ಶುರುವಾಗುವ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ಇದರ ಜೊತೆ ಸಂಭಾವ್ಯರ ಪಟ್ಟಿಯಲ್ಲಿ ಅನೇಕರ ಹೆಸರು ಹರಿದಾಡುತ್ತಿದೆ. ಅದರಲ್ಲಿ ಇಬ್ಬರು ಕನ್ನಡತಿಯರ ಹೆಸರು ಇದೆ.
ಇದೇ ಸೆ.8ರಂದು ಬಿಗ್ ಬಾಸ್ ತೆಲುಗಿಗೆ ಅದ್ಧೂರಿ ಚಾಲನೆ ಸಿಗಲಿದೆ. ಸಂಜೆ 6 ಗಂಟೆಯಿಂದ ಶೋ ಪ್ರಾರಂಭವಾಗಲಿದೆ. ನಾಗಾರ್ಜುನ ಅಕ್ಕಿನೇನಿ ಅವರ ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಉದ್ಯಮಿ ಕಬೀರ್ ಜೊತೆಗಿನ ಡೇಟಿಂಗ್ ಸುದ್ದಿ ಸುಳ್ಳು ಎಂದ ಕೃತಿ ಸನೋನ್
ಬಿಗ್ ಬಾಸ್ ಪ್ರೋಮೋ ರಿಲೀಸ್ ಆದ ಬೆನ್ನಲ್ಲೇ, ಸಂಭಾವ್ಯ ಅಭ್ಯರ್ಥಿಗಳ ಹೆಸರು ವೈರಲ್ ಆಗುತ್ತಿದೆ. ಅದರಂತೆ ಜ್ಯೋತಿಷ್ಯ ವೇಣುಸ್ವಾಮಿ, ಯೂಟ್ಯೂಬರ್ ಯಾದಂ ರಾಜು ರಿತು ಚೌಧರಿ, ಕಿರುತೆರೆ ತಾರೆಯರಾದ ಅಂಜಲಿ, ಹಿರಿಯ ನಟಿ ಸನಾ, ನಟ ಅನಿಲ್ ಗೀಲಾ, ಹಾಸ್ಯನಟ ಬುಂಚಿಕ್ ಬಬ್ಲು, ರಿಂಗ್ ರಿಯಾಜ್, ನಿರೂಪಕಿ ವಿಂಧ್ಯಾ ವಿಶಾಖ, ಪಾಗಲ್ ಪವಿತ್ರಾ ಹೀಗೆ ಹಲವು ಜನರ ಹೆಸರಿದೆ. ಮೂಲತಃ ಕನ್ನಡದವರಾದ ಯಶ್ಮಿ ಗೌಡ (Yashmi Gowda), ತೇಜಸ್ವಿನಿ ಗೌಡ (Tejaswini Gowda) ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಅಂದರೆ, ನಂದಮೂರಿ ಕುಟುಂಬದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಚೈತನ್ಯ ಕೃಷ್ಣ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಅಧಿಕೃತ ಮಾಹಿತಿಗಾಗಿ ಸೆ.8ರವರೆಗೂ ಕಾದುನೋಡಬೇಕಿದೆ.